ನೀವು ಮೊದಲ ಬಾರಿಗೆ ಸ್ಮಾರ್ಟ್’ಫೋನ್ ಕೊಂಡಿದ್ದಾಗ ಬ್ಯಾಟರಿ ಸಮಸ್ಯೆಯನ್ನು ಅನುಭವಿಸಿಯೇ ಇರುತ್ತೀರಿ. ಫೋನ್’ನಲ್ಲಿರುವ ಬ್ಯಾಟರಿ ನೋಡನೋಡುತ್ತಿದ್ದಂತೆಯೇ ಖತಂ ಆಗಿಬಿಡುತ್ತದೆ. ಇದೇನಪ್ಪಾ ಗ್ರಹಚಾರ ಎಂದು ಕೈಕೈ ಹಿಸುಕಿಕೊಂಡಿರುತ್ತೀರಿ. ವಿವಿಧ ಕಾರಣಗಳಿಂದಾಗಿ ಸ್ಮಾರ್ಟ್’ಫೋನ್’ನಲ್ಲಿರುವ ಬ್ಯಾಟರಿಯ ಬಾಳಿಕೆ ಕಡಿಮೆಯಾಗುತ್ತದೆ. ಇದನ್ನು ತಡೆಯಲು ಇಲ್ಲಿರುವ ಕೆಲ ಟಿಪ್ಸ್ ಕೆಲಸಕ್ಕೆ ಬರಬಹುದು..
1) ಕಪ್ಪು ವಾಲ್’ಪೇಪರ್’ಗಳ ಬಳಕೆ ಬ್ಯಾಟರಿ ಆಯುಷ್ಯ ಉಳಿಸುತ್ತದೆ.
2) ಕಡುಬಣ್ಣದ ಥೀಮ್‌ಗಳನ್ನು ಬಳಸಿ
3) ಆಟೋ ಬ್ರೈಟ್‌ನೆಸ್ ಆಯ್ಕೆಗಳನ್ನು ಆರಿಸದಿರಿ
4) ಕಡಿಮೆ ಅವಧಿಯ ಸ್ಕ್ರೀನ್ ಟೈಂಔಟ್ ಆಯ್ಕೆ ಬ್ಯಾಟರಿ ಉಳಿಕೆಗೆ ರಾಮಬಾಣ
5) ವೈಬ್ರೇಟ್ ಆಯ್ಕೆ ಸದಾ ಜಾರಿಯಲ್ಲಿಡಬೇಡಿ
6) ಲಾಕ್ ಸ್ಕ್ರೀನ್ ನೋಟಿಫಿಕೇಶನ್ ಆಯ್ಕೆಗಳನ್ನು ಜಾಗೃತಿಯಲ್ಲಿಡಿ
7) ಅಸಲಿ ಬ್ಯಾಟರಿಗಳನ್ನು ಮಾತ್ರ ಬಳಸಿ
8) ಬ್ಯಾಟರಿ ಸೇವಿಂಗ್ ಆಪ್ಶನ್‌ಗಳನ್ನು ಜಾಗೃತಗೊಳಿಸಿ
9) ಆಟೋ ಸಿಂಕ್ ಆಯ್ಕೆ ಜಾಗೃತವಾಗಿರಿಸುವುದು ಸೂಕ್ತವಲ್ಲ
10) ನಿಮಗೆ ಸೂಕ್ತವೆನಿಸಿದಾಗ ಮ್ಯಾನುವೆಲ್ ಆಗಿಯೇ ಆ್ಯಪ್‌ಗಳನ್ನು ಅಪ್‌ಡೇಟ್ ಮಾಡಿ