ಅಂತರಾಷ್ಟ್ರೀಯ

ವ್ಯಾಪಾರ, ಭಯೋತ್ಪಾದನೆ ನಿಗ್ರಹ, ಭಾರತ, ಬಹರೇನ್ ಶಪಥ

Pinterest LinkedIn Tumblr

Sushmaಮನಾಮ: ಶಿಕ್ಷಿತ ವ್ಯಕ್ತಿಗಳ ಹಸ್ತಾಂತರ ಜೊತೆಗೆ ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹದಂತಹ ಪ್ರಮುಖ ಕ್ಷೇತ್ರಗಳಲ್ಲಿ ತಮ್ಮ ಬಾಂಧವ್ಯ ಬಲಪಡಿಸಲು ಭಾರತ ಮತ್ತು ಬಹರೇನ್ ಶಪಥ ಮಾಡಿವೆ. ಬಹರೇನ್ ವಿದೇಶಾಂಗ ಸಚಿವರ ಜೊತೆಗೆ ಈ ವಿಚಾರಗಳ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವ್ಯಾಪಕ ಮಾತುಕತೆ ನಡೆಸಿದ್ದಾರೆ.

ಭಾರತ- ಅರಬ್ ಲೀಗ್ ಸಹಕಾರ ಫೋರಂನ ಚೊಚ್ಚಲ ಸಚಿವ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಸ್ವರಾಜ್ ಅವರು ಬಹರೇನ್ ವಿದೇಶಾಂಗ ಸಚಿವ ಅಹಮದ್ ಅಲ್ ಖಲಿಫಾ ಜೊತೆಗೆ ಶನಿವಾರ ವ್ಯಾಪಕ ಮಾತುಕತೆ ನಡೆಸಿದ್ದಾರೆ.

ಮಾತುಕತೆಗಳ ಬಳಿಕ ಉಭಯ ನಾಯಕರೂ ಶಿಕ್ಷಿತ ವ್ಯಕ್ತಿಗಳನ್ನು ಹಸ್ತಾಂತರಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದ ಪ್ರಕಾರ ವಲಸಿಗನಿಗೆ ಬೇರೆ ರಾಷ್ಟ್ರದಲ್ಲಿ ಶಿಕ್ಷೆಯಾದರೆ ಆತನ ಮೂಲ ರಾಷ್ಟ್ರದಲ್ಲಿ ಆ ಶಿಕ್ಷೆಯನ್ನು ಜಾರಿಗೊಳಿಸಬಹುದು. ಉಭಯ ಕಡೆಗಳೂ ಉಳಿದ ಒಪ್ಪಂದಗಳನ್ನು ಪೂರ್ಣಗೊಳಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಿವೆ ಎಂದು ಕಾರ್ಯದರ್ಶಿ (ಪೂರ್ವ) ಅನಿಲ್ ವಾಧ್ವಾ ಅವರು ಮಾತುಕತೆಗಳ ಬಳಿಕ ವರದಿಗಾರರಿಗೆ ತಿಳಿಸಿದರು. ಎರಡೂ ರಾಷ್ಟ್ರಗಳಲ್ಲಿ ತೆರಿಗೆ ತಪ್ಪಿಸಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳೂ ಒಪ್ಪಂದಕ್ಕೆ ಸಹಿಹಾಕಬೇಕು ಎಂದು ಬಹರೇನ್ ಇಚ್ಛಿಸಿದೆ ಎಂದು ಮೂಲಗಳು ತಿಳಿಸಿವೆ.

Write A Comment