ಕೈರೋ: ಈಜಿಪ್ಟ್ನ ಉತ್ತರ ಸಿನಾಯಿ ಪ್ರಾಂತ್ಯದಲ್ಲಿ ಪೊಲೀಸ್ ಚೆಕ್ಪೋಸ್ಟ್ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಮೂವರು ಅಧಿಕಾರಿಗಳು ಸೇರಿ, ಐವರು ಪೊಲೀಸರು ಮೃತರಾಗಿದ್ದಾರೆ.
ಸಿನಾಯಿ ಪ್ರಾಂತ್ಯದ ಅಲ್ ಅರಿಷ್ ನಗರದಲ್ಲಿ ಉಗ್ರರು ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಸಿನಾಯಿ ಪ್ರದೇಶದಲ್ಲಿ ಜನವರಿ 2011ರಿಂದ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿವೆ. ಪೊಲೀಸರು ಮತ್ತು ಉಗ್ರರ ನಡುವೆ ನಡೆದ ಕಾದಾಟದಲ್ಲಿ 2011ರಿಂದ ಇದುವರೆಗೆ 700 ಭದ್ರತಾ ಸಿಬ್ಬಂದಿ ಮೃತರಾಗಿದ್ದರೆ, 18 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.