ಅಂತರಾಷ್ಟ್ರೀಯ

ಪರಸ್ತ್ರಿ ಜತೆ ಕಾರಿನಲ್ಲಿ ಸಲ್ಲಾಪ…ರಸ್ತೆಯಲ್ಲಿ ಪತ್ನಿ ಹೈಡ್ರಾಮಾ

Pinterest LinkedIn Tumblr

2swಕೊಲಂಬಿಯಾ: ಪರಸ್ತ್ರೀಯೊಂದಿಗೆ ಕಾರಿನಲ್ಲಿ ಪತಿ ಮಹಾಶಯನೊಬ್ಬ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ನಡುರಸ್ತೆಯಲ್ಲಿ ಪತ್ನಿ ಕಾರು ನಿಲ್ಲಿಸಿ ಹೈ-ಡ್ರಾಮ ಸೃಷ್ಟಿಸಿದ ಘಟನೆ ನಡೆದಿದೆ.

ಘಟನೆ ನಡೆದಿರುವುದು ಕೊಲಂಬಿಯಾದಲ್ಲಿ. ಪತಿರಾಯನೊಬ್ಬ ತನ್ನ ಹೆಂಡತಿ ಬಿಟ್ಟು ಬೇರೆ ಮಹಿಳೆಯೊಂದಿಗೆ ಕಾರಿನಲ್ಲಿ ಸರಸ-ಸಲ್ಲಾಪ ನಡೆಸುತ್ತಿದ್ದ ವೇಳೆ ಕಾರು ಕಂಡ ಹೆಂಡತಿ ನಡುರಸ್ತೆಯಲ್ಲಿ ಹೈ-ಡ್ರಾಮಾ ಸೃಷ್ಟಿಸಿದ್ದಾಳೆ. ಇದರಿಂದ ಗಂಡ ತಬ್ಬಿಬ್ಬಾಗಿದ್ದಾನೆ.

ಕಾರಿನ ಮೇಲೆ ಏಕಾಏಕಿ ನುಗ್ಗಿದ ಅವಳು ಗ್ಲಾಸ್‌‌ ತೆಗೆಯುವಂತೆ ಗಂಡನಿಗೆ ಒತ್ತಾಯಿಸಿದ್ದಾಳೆ. ಇದಕ್ಕೆ ಪತಿ ನಿರಾಕರಿಸಿದ್ದಾಗ ಜೋರಾಗಿ ಕಿರುಚಿಕೊಂಡು ಕಾರಿನ ಗಾಜು ಒಡೆಯಲು ಮುಂದಾಗಿದ್ದಾಳೆ. ಆ ವೇಳೆ ಸಾರ್ವಜನಿಕರು ಸ್ಥಳದಲ್ಲಿ ಸೇರಿದ್ದಾರೆ. ನಂತರ ಆಕೆಯ ಗಂಡ ಪರಸ್ತ್ರಿಯೊಂದಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಕಾರಿನಲ್ಲಿ ಇಬ್ಬರು ಅರೆಬರೆ ಬಟ್ಟೆ ತೊಟ್ಟಿರುವ ದೃಶ್ಯ ನೋಡುತ್ತಿದ್ದಂತೆ ಸ್ಥಳದಲ್ಲಿದ್ದವರು ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Write A Comment