
ವಾಷಿಂಗ್ಟನ್, ಡಿ.17-ಕಳೆದೊಂದು ವರ್ಷದ ಅವಧಿಗೆ ಇದೇ ಮೊದಲ ಬಾರಿಗೆ ಅಮೆರಿಕದ ಫೆಡರಲ್ ಬ್ಯಾಂಕ್ ಸಾಲದ ಬಡ್ಡಿ ದರವನ್ನು ಶೇ.0.25 ರಿಂದ 0.50ಕ್ಕೆ ಹೆಚ್ಚಿಸಿದೆ. 2007-09ರ ಸಂದರ್ಭ ಎದುರಿಸಿದ್ದ ಆರ್ಥಿಕ ಹಿಂಜರಿತದಿಂದ ಹೊರಬರಲು ಈ ಕ್ರಮ ಕೈಗೊಳ್ಳಲಾಗಿದೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ನೀತಿ ನಿರೂಪಣಾ ಸಮಿತಿಯು ಕಳೆದ 10 ವರ್ಷಗಳಲ್ಲಿ ಈ ಕ್ರಮ ಕೈಗೊಂಡಿದ್ದು, ಈ ಮೊದಲಿದ್ದ ಶೇ.0.25ರ ಬಡ್ಡಿ ದರವನ್ನು ಶೇ.0.50ಕ್ಕೆ ಹೆಚ್ಚಿಸಿದೆ ಎಂದು ಫೆಡರಲ್ ಬ್ಯಾಂಕ್ ಮೂಲಗಳು ತಿಳಿಸಿವೆ. ಈ ಬಡ್ಡಿ ಏರಿಕೆ ಕ್ರಮದಿಂದ ದೇಶದ ಆರ್ಥಿಕತೆ ಸದೃಢವಾಗಲಿದೆ ಎಂಬುದು ಸಮಿತಿಯ ನಿರೀಕ್ಷೆಯಾಗಿದೆ.
ಇತ್ತೀಚೆಗೆ ಹಣದುಬ್ಬರ ದರ ಶೇ.2ರಷ್ಟು ಏರಿದ್ದು, ಬಡ್ಡಿ ದರದಲ್ಲಿ ಏರಿಕೆ ಮಾಡಿರುವುದು ಅದರ ಮೇಲೆ ಪರಿಣಾಮ ಬೀರಲಿದೆ ಎಂದು ಸಮಿತಿ ಭರವಸೆ ವ್ಯಕ್ತಪಡಿಸಿದೆ.