ರಾಷ್ಟ್ರೀಯ

ನಾನು ಗೂಗಲ್ ಸಿಇಒ ಆಗಿರದಿದ್ದರೆ, ಸಾಫ್ಟ್ ವೇರ್ ನ್ನು ನಿರ್ಮಿಸುತ್ತಿದೆ: ಸುಂದರ್ ಪಿಚೈ

Pinterest LinkedIn Tumblr

google-ceo

ನವದೆಹಲಿ: ನಾನು ಗೂಗಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರದಿದ್ದಿದ್ದರೆ ಇನ್ನು ಕೂಡ ಸಾಫ್ಟ್ ವೇರ್ ಉತ್ಪನ್ನಗಳನ್ನು ನಿರ್ಮಿಸುತ್ತಿದೆ ಎಂದು ಗೂಗಲ್ ಇಂಟರ್ ನೆಟ್ ಶೋಧನೆ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ ತಿಳಿಸಿದ್ದಾರೆ.

ನಾನು ಸಹ ಕಂಪನಿ ಆರಂಭಿಸಿದ್ದೆ, ಆದರೆ ಅದು ಫಲ ನೀಡಲಿಲ್ಲ, ಹಾಕಿದ ಬಂಡವಾಳ ಕೂಡ ಹಿಂತಿರುಗಿ ಬರಲಿಲ್ಲ. ಸೋತು ಕೈಸುಟ್ಟುಕೊಂಡೆ. ಆದರೆ ಸೋಲು ನನ್ನನ್ನು ಕುಗ್ಗಿಸಿಲ್ಲ. ಬದಲಾಗಿ ಜೀನನದಲ್ಲಿ ಮತ್ತಷ್ಟು ಸಾಧನೆ ಮಾಡಲು ಹುಮ್ಮಸ್ಸು ನೀಡಿತು. ನೀವು ನಿಮ್ಮ ಕನಸುಗಳನ್ನು ಬೆನ್ನತ್ತಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ತಮ್ಮ ವೃತ್ತಾಂತವನ್ನು ಹೇಳಿದರು.

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು, ಗೂಗಲ್ ಸಿಇಒ ಆಗಿ ನೇಮಕಗೊಂಡ ನಂತರ ಅಮೆರಿಕದಿಂದ ಹೊರಗೆ ಅವರು ಕೈಗೊಂಡಿರುವ ಮೊದಲ ಪ್ರವಾಸ ಇದಾಗಿದೆ. ಕ್ರಿಕೆಟ್ ಕಮೆಂಟರ್ ಹರ್ಷ ಬೋಗ್ಲೆ ಅವರನ್ನು ಸಂದರ್ಶನ ನಡೆಸಿದರು.

30 ವರ್ಷಗಳು ಕಳೆದ ನಂತರ ಗೂಗಲ್ ನ ಸ್ಥಿತಿಗತಿಯನ್ನು ಎಲ್ಲಿ ಮತ್ತು ಹೇಗೆ ನೋಡಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಿಚೈ, ಇಡೀ ಜನ ಸಮುದಾಯದ ಸಮಸ್ಯೆಯನ್ನು ಬಗೆಹರಿಸಲು ನೆರವಾಗುವ ಉತ್ಪನ್ನಗಳನ್ನು ತಯಾರಿಸಲು ಕಂಪೆನಿ ಬಯಸುತ್ತದೆ. ಅದು 30 ವರ್ಷಗಳೊಳಗೆ ಈಡೇರುತ್ತದೆ ಎಂಬ ಆಶಾವಾದ ತಮಗಿದೆ ಎಂದರು.

ದೇಶಾದ್ಯಂತ ವೈಫೈ ಸೌಲಭ್ಯ ನೀಡುವುದು ನಮ್ಮ ಗುರಿ. ಗೂಗಲ್ ಸಂಸ್ಥೆಯ ಸೇವೆ ಪ್ರತಿಯೊಬ್ಬರಿಗೂ ತಲುಪಬೇಕು. ಅಷ್ಟೇ ಅಲ್ಲ ಭಾರತದ ಗ್ರಾಮೀಣ ಭಾಗದ ಮಹಿಳೆಯರಿಗೆ ಶಿಕ್ಷಣ ದೊರೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಜೊತೆ ಸೇರಿ ಮಹಿಳೆಯರ ಶಿಕ್ಷಣಕ್ಕೆ ನೆರವು ನೀಡುತ್ತೇವೆ ಎಂದರು.

ಅಮೆರಿಕದಲ್ಲಿ ಜನರು ರಿಸ್ಕ್ ತೆಗೆದುಕೊಳ್ಳುವ ಸಂಸ್ಕೃತಿ ಬೆಳೆದಿದೆ. ಜೀವನದಲ್ಲಿ ರಿಸ್ಕ್ ತೆಗೆದುಕೊಂಡರೆ ಮುಂದೆ ಬರಲು ಸಾಧ್ಯ. ನಮ್ಮ ದೇಶದ ಯುವ ಜನತೆ ರಿಸ್ಕ್ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಪಿಚೈ ಹೇಳಿದರು.

Write A Comment