ಕರ್ನಾಟಕ

ಪೊಲೀಸರು ಪ್ರತಿಭಟನೆ ನಡೆಸುವಂತಿಲ್ಲ : ಪರಂ

Pinterest LinkedIn Tumblr

param

ಬೆಂಗಳೂರು: ಮೇಲಧಿಕಾರಿಗಳ ಕಿರುಕುಳದ ಕಾರಣಕ್ಕಾಗಿ ಹಾವೇರಿ ಸಶಸ್ತ್ರ ಮೀಸಲು ಪಡೆಯ ಹತ್ತು ಪೊಲೀಸರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಪ್ರಕರಣದ ಕುರಿತಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಂದ ವರದಿ ಕೇಳಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಶಿಸ್ತಿನ ಇಲಾಖೆಯಾಗಿರುವ ಪೊಲೀಸ್‌ ಇಲಾಖೆಯಲ್ಲಿ ಅಶಿಸ್ತು, ಪ್ರತಿಭಟನೆಗಳನ್ನು ಸಹಿಸುವುದಿಲ್ಲ. ಆದರೆ, ಹತ್ತು ಪೊಲೀಸರು ದಯಾಮರಣ ಕೋರಿ ಪತ್ರ ಬರೆಯಲು ಕಾರಣವೇನು? ಅವರಿಗೆ ಕಿರುಕುಳ ನೀಡಿದ ಅಧಿಕಾರಿ ಯಾರು ಎಂಬ ಬಗ್ಗೆ ಪೊಲೀಸ್‌ ಮಹಾ ನಿರ್ದೇಶಕರಿಂದ ವರದಿ ಕೇಳಲಾಗಿದೆ. ಈ ಪ್ರಕರಣದಲ್ಲಿ ಯಾರದ್ದೇ ತಪ್ಪಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಎರಡು ಕಡೆ ಪೊಲೀಸರು ಪ್ರತಿಭಟನೆ ನಡೆಸಿದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇಲಾಖೆಯಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ಆಂತರಿಕವಾಗಿಯೇ ಬಗೆಹರಿಸಿಕೊಳ್ಳಬೇಕೇ ಹೊರತು ಬಹಿರಂಗವಾಗಿ ಚರ್ಚಿಸುವುದು, ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಸರಿಯಲ್ಲ. ಇಂತಹ ನಡವಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
-ಉದಯವಾಣಿ

Write A Comment