ಅಂತರಾಷ್ಟ್ರೀಯ

ಕ್ಯಾಲಿಫೋರ್ನಿಯಾ ನರಮೇಧದಲ್ಲಿ ಪಾಕ್ ಮೂಲದ ದಂಪತಿ ಪಾತ್ರ : ಮೂಲಭೂತವಾದಿಗಳ ನೆಲೆಗಳ ಮೇಲೆ ತನಿಖೆ

Pinterest LinkedIn Tumblr

caliವಾಷಿಂಗ್ಟನ್, ಡಿ.5-ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ನರಮೇಧದಲ್ಲಿ ಪಾಕಿಸ್ತಾನ ಮೂಲದ ದಂಪತಿ ಪ್ರಮುಖ ಪಾತ್ರ ವಹಿಸಿರುವುದು ಇಸ್ಲಾಮಾಬಾದ್ ಮತ್ತು ಅಲ್ಲಿನ ಮದರಸಾಗಳಲ್ಲಿ ವಿಜೃಂಭಿಸುತ್ತಿರುವ ಮೂಲಭೂತವಾದಿ ಶಕ್ತಿಗಳ ಮೇಲೆ ಬೆಳಕು ಚೆಲ್ಲಿದೆ.

ಒಂದು ಮೂಲದ ಪ್ರಕಾರ, ಪಾಕಿಸ್ತಾನ ಪ್ರಜೆಗಳಾದ 27 ವರ್ಷದ ತಸ್‌ಫೀನ್ ಮಲ್ಲಿಕ್ ಮತ್ತು ಆಕೆಯ ಪತಿ 28 ವರ್ಷದ ರಿಜ್ವಾನ್ ಫಾರೂಕ್ ಇಬ್ಬರೂ ಪಾಕಿಸ್ತಾನದ ಕುಖ್ಯಾತ ಲಾಲ್ ಮಸೀದಿ ಕೆಂಪು ಮಸೀದಿ ಮುಖ್ಯಸ್ಥ ಮೌಲಾನಾ ಅಬ್ದುಲ್ ಮಜೀದ್‌ನೊಂದಿಗೆ ನಿಕಟ ಸಂಪರ್ಕದಲ್ಲಿರುವುದು ತನಿಖೆಯಿಂದ ಬಯಲಾಗಿದೆ. ಈ ಕುರಿತಂತೆ ಲಂಡನ್‌ನಲ್ಲಿರುವ ಅಮೆರಿಕ ಅಧಿಕಾರಿಗಳು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶಹಬಾಜ್ ಷರೀಫ್ ಅವರೊಂದಿಗೆ ಚರ್ಚಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಹಲವು ವರ್ಷಗಳನ್ನು ಕಳೆದ ತಸ್‌ಫೀನ್ ಮಲಿಕ್ ನಂತರ ವೈದ್ಯಕೀಯ ಶಿಕ್ಷಣಕ್ಕಾಗಿ ಪಾಕಿಸ್ತಾನದ ಮುಲ್ತಾನ್‌ನಲ್ಲಿರುವ ಬಹಾವದ್ದೀನ್ ಝಖಾರಿಯಾ ಯೂನಿವರ್ಸಿಟಿಗೆ ಬಂದಿದ್ದರು.
ಪಾಕಿಸ್ತಾನದ ಮಾಧ್ಯಮಗಳೂ ಕೂಡ ತಸ್‌ಫೀನ್ ಮಲಿಕ್ ದಂಪತಿಗೆ ಮೌಲಾನಾ ಅಬ್ದುಲ್ ಅಜೀಜ್ ಜೊತೆ ನಿಕಟವಾದ ಸಂಬಂಧವಿದೆ ಎಂದು ಹೇಳಿವೆ.

Write A Comment