ಅಂತರಾಷ್ಟ್ರೀಯ

ಇಸ್ಲಾಮಿಕ್ ಸ್ಟೇಟ್ ಉಗ್ರರ ನಿರ್ನಾಮಕ್ಕೆ ಜರ್ಮನಿಯ 1200 ಯೋಧರ ಪಡೆ

Pinterest LinkedIn Tumblr

Germany-troopಬರ್ಲಿನ್: ಇಡೀ ಜಗತ್ತನ್ನೇ ತನ್ನ ಉಗ್ರತ್ವದಿಂದ ಬೆದರಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಬುಡ ಸಮೇತ ಕಿತ್ತು ಹಾಕಲು ವಿಶ್ವ ಸಮುದಾಯ ಒಗ್ಗೂಡಿದ್ದು, ರಷ್ಯಾ, ಬ್ರಿಟನ್ ಬಳಿಕ ಇದೀಗ ಜರ್ಮನಿ ಕೂಡ ಇಸಿಸ್ ವಿರುದ್ಧ ತೊಡೆ ತಟ್ಟಿ ನಿಂತಿದೆ.

ಸಿರಿಯಾದಲ್ಲಿರುವ ಇಸಿಸ್ ಉಗ್ರರ ದಮನಕ್ಕಾಗಿ ಜರ್ಮನಿ 1200 ಯೋಧ ಬಲದ ಪಡೆಯನ್ನು ಸಿದ್ಧಗೊಳಿಸಿದೆ. ಐಸಿಸ್ ಉಗ್ರರ ದಮನ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಪ್ರಸ್ತಾವನೆಗೆ ಜರ್ಮನಿಯ ಸಂಸತ್ ಬುಂಡೆಸ್ಟಾಗ್ ಒಕ್ಕೂರಲ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಜರ್ಮನಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಜರ್ಮನಿಯ 6 ಟಾರ್ನಾಡೋ ಜೆಟ್​ಗಳು ಮತ್ತು ಮರು ಇಂಧನ ಪೂರೈಕೆ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ.

ಇಸಿಸ್ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಜರ್ಮನಿಯ ಸಶಸ್ತ್ರ ದಳ ನೇರವಾಗಿ ಭಾಗವಹಿಸದೆ, ಸದ್ಯ ಕಾರ್ಯಾಚರಣನೆ ನಡೆಸುತ್ತಿರುವ ಬ್ರಿಟನ್, ಫ್ರಾನ್ಸ್, ಅಮೆರಿಕ ಮತ್ತು ರಷ್ಯಾದ ಪಡೆಗಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲಿರುವುದಾಗಿ ಜರ್ಮನಿ ಸರ್ಕಾರ ತಿಳಿಸಿದೆ.

Write A Comment