ಕರ್ನಾಟಕ

ಭೂಪರಿವರ್ತನೆಗೆ ಅಪರ ಜಿಲ್ಲಾಧಿಕಾರಿಯ ಪೋರ್ಜರಿ ಸಹಿ: ಶಿವಮೊಗ್ಗದಲ್ಲಿ ಓರ್ವನ ಬಂಧನ

Pinterest LinkedIn Tumblr

01____fi

ಶಿವಮೊಗ್ಗ, ಡಿ. 4: ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಯವರ ಸಹಿ ಪೋರ್ಜರಿ ಮಾಡಿ ಭೂ ಪರಿವರ್ತನೆಯ ನಕಲಿ ಆದೇಶ ಸೃಷ್ಟಿಸಿ ಕೊಟ್ಟಿದ್ದ ಆರೋಪಕ್ಕೆ ಸಂಬಂಧಿಸಿ ದಂತೆ ಜಯ ನಗರ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಘಟನೆ ವರದಿಯಾಗಿದೆ.

ಯಲವಟ್ಟಿ ಗ್ರಾಮದ ನಿವಾಸಿ ಪ್ರಶಾಂತ್ (28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಅಪರ ಜಿಲ್ಲಾಧಿಕಾರಿ (ಎ.ಡಿ.ಸಿ.) ಎನ್.ಎಂ. ನಾಗರಾಜ್ ಅವರು ತನ್ನ ಸಹಿ ಪೋರ್ಜರಿ ಮಾಡಿ ಭೂ ಪರಿವರ್ತನೆಯ ನಕಲಿ ಆದೇಶ ಹೊರ ಡಿಸಲಾಗಿದೆ ಎಂದು ದೂರಿ ಜಯನಗರ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ ಕೊಂಡ ಪೊಲೀಸರು ಪ್ರಶಾಂತ್‌ನನ್ನು ಬಂಧಿಸಿದ್ದಾರೆ.

ಇನ್‌ಸ್ಪೆಕ್ಟರ್ ದೀಪಕ್ ಹೆಗ್ಡೆ, ಸಬ್‌ಇನ್‌ಸ್ಪೆಕ್ಟರ್ ರವಿ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯ ವಿರುದ್ಧ ಐಪಿಸಿ ಕಲಂ 465, 466, 467, 468, 471 ಹಾಗೂ 420ರ ಅಡಿ ಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದು ವರಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿರುವ ಮಾಹಿತಿ ದೊರೆತಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕವಷ್ಟೇ ಈ ಪೋರ್ಜರಿ ಜಾಲದಲ್ಲಿರುವವರ ವಿವರಗಳು ಬಯಲಾಗಬೇಕಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಆರೋಪವೇನು: ಆರೋಪಿ ಪ್ರಶಾಂತ್ ಶಿವ ಮೊಗ್ಗ ನಗರದ ರಾಜಸ್ವ ನಿರೀಕ್ಷಕ (ಆರ್.ಐ.)ರ ಕಚೇರಿಯಲ್ಲಿ ಆರ್.ಐ.ರೋರ್ವ ರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಈತನನ್ನು ಕೆಲಸದಿಂದ ಬಿಡಿಸಲಾಗಿತ್ತು. ಈತ ಆರ್.ಐ. ಬಳಿ ಕೆಲಸ ಮಾಡುತ್ತಿದ್ದ ಸಂದ ಭರ್ದಲ್ಲಿಯೇ ಇತರರೊಂದಿಗೆ ಸೇರಿಕೊಂಡು ಈ ಹೇರಾಪೇರಿ ನಡೆಸಿರುವುದು ಬೆಳಕಿಗೆ ಬಂದಿದೆ. ನಗರದ ಕಾಶೀಪುರ ಬಡಾವಣೆಯಲ್ಲಿರುವ 2 ಗುಂಟೆ ಜಾಗದ ಭೂ ಪರಿವರ್ತನೆ ಮಾಡಿಸಲು ಸಂಬಂಧಿಸಿದ ಜಮೀನಿನ ಮಾಲಕರು ಮಧ್ಯವರ್ತಿಯೋರ್ವರ ನೆರವು ಪಡೆದುಕೊಂಡಿ ದ್ದರು. ಮಧ್ಯವರ್ತಿಯು ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್‌ನ ಮೂಲಕ ಈ ಕೆಲಸ ಮಾಡಿಸಲು ಮುಂ ದಾಗಿದ್ದಾರೆ ಎನ್ನಲಾಗಿದೆ. ಪ್ರಶಾಂತ್‌ನು ಎ.ಡಿ.ಸಿ. ಎನ್.ಎಂ.ನಾಗ ರಾಜ್‌ರವರ ಸಹಿ ಪೋರ್ಜರಿ ಮಾಡಿ, ಭೂಪರಿವರ್ತನೆ ಮಾಡಿರುವ ನಕಲಿ ಆದೇಶ ಸೃಷ್ಟಿಸಿ ಭೂಮಾಲಕರಿಗೆ ಕೊಟ್ಟಿದ್ದಾರೆ. ಈ ಆದೇಶದ ಪ್ರತಿಯೊಂದಿಗೆ ಭೂಮಾಲಕರು ಮಹಾ ನಗರ ಪಾಲಿಕೆಯಲ್ಲಿ ಜಮೀನಿಗೆ ಖಾತೆ ಮಾಡಿಸಲು ಮುಂದಾ ದ ವೇಳೆ, ಆದೇಶದ ಪ್ರತಿಯಲ್ಲಿ ಎ.ಡಿ.ಸಿ. ಕಚೇರಿ ಯ ಸೀಲು ಹಾಕದಿ ರುವುದನ್ನು ಪಾಲಿಕೆ ಅಧಿಕಾರಿಗಳು ಗುರುತಿಸಿದ್ದಾರೆ. ಭೂಮಾಲ ಕರಿಗೆ ಸೀಲು ಹಾಕಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಅದರಂತೆ ಭೂಮಾಲಕರು ಎ.ಡಿ.ಸಿ. ಕಚೇರಿಗೆ ಆಗಮಿಸಿ ಅಲ್ಲಿನ ಸಿಬ್ಬಂದಿಗೆ ಸೀಲು ಹಾಕಿಕೊಡುವಂತೆ ಕೋರಿದ್ದಾರೆ. ಈ ಸಂದರ್ಭದಲ್ಲಿ ಆದೇಶದ ಪ್ರತಿಯ ಮೇಲಿದ್ದ ಸಹಿಯ ಬಗ್ಗೆ ಅನುಮಾನ ಗೊಂಡಿದ್ದಾರೆ. ಈ ಬಗ್ಗೆ ಎ.ಡಿ.ಸಿ. ನಾಗ ರಾಜ್‌ರ ಗಮನಕ್ಕೆ ತಂದಿದ್ದಾರೆ. ಅವರು ಪರಿಶೀಲನೆ ನಡೆಸಿದ ಸಂದರ್ಭ ದಲ್ಲಿ ಆದೇಶದ ಪ್ರತಿಯ ಮೇಲಿರುವುದು ತನ್ನ ಸಹಿಯಲ್ಲ ಎಂಬು ವುದು ಗೊತ್ತಾಗಿದೆ. ಸಂಬಂಧಿಸಿದ ಭೂ ಮಾಲಕರಿಂದ ಮಾಹಿತಿ ಸಂಗ್ರಹಿಸಿದಾಗ ವೃತ್ತಾಂತದ ಸಮಗ್ರ ವಿವರ ನೀಡಿದ್ದಾರೆ.

ಹಲವರು ಭಾಗಿಯಾಗಿರುವ ಅನು ಮಾನ:
ಎ.ಡಿ.ಸಿ. ಸಹಿ ನಕಲಿ ಮಾಡಿ ಭೂಪರಿವರ್ತನೆಯ ಆದೇಶ ಸೃಷ್ಟಿಯ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಇದರಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಹಿರಿಯ ಅಧಿಕಾರಿಯೊಬ್ಬರ ಸೂಚನೆಯ ಮೇರೆಗೆ ಆರೋಪಿ ಪ್ರಶಾಂತ್ ಈ ಕೃತ್ಯ ಮಾಡಿದ್ದ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಪೊಲೀಸ್ ತನಿಖೆಯ ವೇಳೆ ಆರೋಪಿಯು ತನಗೆ ಸಹಕರಿಸಿದವರ ಮಾಹಿತಿ ನೀಡಿದ್ದಾನೆ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಸಹಿ ಪೋರ್ಜರಿ ಮಾಡಿ ಭೂಪರಿ ವರ್ತನೆಯ ನಕಲಿ ಆದೇಶ ಸೃಷ್ಟಿಸಿ ಕೊಡುವ ಭಾರೀ ದೊಡ್ಡ ಪ್ರಮಾಣದ ವಂಚನಾ ಜಾಲವೇ ಸಕ್ರಿಯವಾಗಿರುವ ಅನುಮಾ ನಗಳು ಕೂಡ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಈ ಹಿಂದೆ ಇದೇ ರೀತಿಯಾಗಿ ನಕಲಿ ಆದೇಶಗಳನ್ನು ಸೃಷ್ಟಿಸಲಾಗಿತ್ತೆ?ಎಂಬಿತ್ಯಾದಿ ವಿವರಗಳು ಪೊಲೀಸರ ಉನ್ನತ ಮಟ್ಟದ ತನಿಖೆ ಯಿಂದ ಬಯಲಾಗಬೇಕಾಗಿದೆ. ‘ದಾಖಲೆಗಳ ಪರಿಶೀಲನೆಗೆ ಆದೇಶ’: ಶಿವಮೊಗ: ‘ತಮ್ಮ ಹೆಸರನ್ನು ಪೋರ್ಜರಿ ಮಾಡಿ ಭೂಪರಿವರ್ತನೆಯ ನಕಲಿ ದಾಖಲೆ ಸೃಷ್ಟಿಸಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಈ ಹಿಂದೆ ನಡೆದಿರುವ ಭೂಪರಿ ವರ್ತನೆಯ ಆದೇಶಗಳ ಸಮಗ್ರ ಪರಿಶೀಲ ನೆಗೆ ತಮ್ಮ ಕಚೇರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದ್ದಾರೆ. ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಭೂ ಪರಿವರ್ತನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸಲ್ಲಿಕೆಯಾಗಿರುವ ಭೂ ಪರಿವರ್ತನೆಯ ಆದೇಶಗಳ ಪ್ರತಿಗಳ ಸಮಗ್ರ ಮಾಹಿತಿ ಪಡೆದು ಕೂಲಂಕಷ ತನಿಖೆ ನಡೆಸಲಾಗುತ್ತಿದೆ. ಪರಿಶೀಲನೆಯ ನಂತರವಷ್ಟೆ ಈ ಹಿಂದಿನಿಂದಲೂ ಸಹಿ ಪೋರ್ಜರಿ ಮಾಡಿ, ನಕಲಿ ಭೂಪರಿವರ್ತನೆಯ ಆದೇಶಗಳನ್ನು ಸೃಷ್ಟಿ ಮಾಡುತ್ತಿರುವ ಕುರಿತಂತೆ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ಹಿಂದೆ ಅಧಿಕಾರಿಗಳೇನಾದರೂ ಶಾಮೀಲಾಗಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎನ್.ಎಂ.ನಾಗರಾಜ್, ಪ್ರಸ್ತುತ ಬೆಳಕಿಗೆ ಬಂದಿರುವ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಓರ್ವನನ್ನು ಬಂಧಿಸಿರುವ ಮಾಹಿತಿಯಿದೆ. ಪೊಲೀಸರ ತನಿಖೆಯ ನಂತರವಷ್ಟೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಬೇಕಾಗಿದೆ ಎಂದರು.

Write A Comment