ರಾಷ್ಟ್ರೀಯ

ಕುಖ್ಯಾತ ದಂಡುಪಾಳ್ಯ ಹಂತಕರಿಗೆ ‘ಸುಪ್ರೀಂ’ ರಿಲೀಫ್

Pinterest LinkedIn Tumblr

Dandupalya-Gangನವದೆಹಲಿ: ವಿಕೃತವಾಗಿ ಕೊಲೆ ಮಾಡುವ ಮೂಲಕ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ದಂಡುಪಾಳ್ಯದ ಹಂತಕರಿಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ.

2014ರಲ್ಲಿ ಹೈಕೋರ್ಟ್ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ದಂಡುಪಾಳ್ಯದ ಹಂತರ ವಿರುದ್ಧದ ಪ್ರಕರಣವನ್ನು ಖುಲಾಸೆ ಮಾಡಿತ್ತು. ಈ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ ಮತ್ತೆ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಿ ದಂಡುಪಾಳ್ಯ ತಂಡದ 6 ಆರೋಪಿಗಳಿಗೆ ರಿಲೀಫ್​ ನೀಡಿದೆ.

ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದ್ದ ವಿವಿಧ ಹತ್ಯಾ ಪ್ರಕರಣಗಳ ಕುಖ್ಯಾತ ದಂಡು ಪಾಳ್ಯ ಗ್ಯಾಂಗ್ ಗೆ 2010ರಲ್ಲಿ ಸೆಷನ್ಸ್​ ಕೋರ್ಟ್​ ಗಲ್ಲುಶಿಕ್ಷೆ ವಿಧಿಸಿತ್ತು. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ 2014ರಲ್ಲಿ ಹೈಕೋರ್ಟ್ ದಂಡುಪಾಳ್ಯದ ಹಂತರ ವಿರುದ್ಧದ ಪ್ರಕರಣವನ್ನು ಖುಲಾಸೆ ಮಾಡಿತ್ತು.

ಆರೋಪಿಗಳಾದ ದಂಡುಪಾಳ್ಯದ ವೆಂಕಟರಾಮ, ದೊಡ್ಡಹನುಮ, ಹೊಟ್ಟೆ ಕೃಷ್ಣ,  ಚಿಕ್ಕ ಮುನಿಯಪ್ಪ, ಕೃಷ್ಣ, ತಿಮ್ಮ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.

Write A Comment