ಅಂತರಾಷ್ಟ್ರೀಯ

ಬೊಕ್ಕತಲೆ ಗುಣ ಪಡಿಸಲು ಸಿಕ್ಕಿತು ಔಷಧಿ

Pinterest LinkedIn Tumblr

baldnessನ್ಯೂಯಾರ್ಕ್: ಬೊಕ್ಕ ತಲೆ ಸಮಸ್ಯೆಯ ಬಗ್ಗೆ ಕಿರಿಕಿರಿ ಅನುಭವಿಸುವ ಕಾಲ ಹೋಯ್ತು. ಈಗ ಬೊಕ್ಕತಲೆಯಲ್ಲೂ ಕೂದಲು ಬೆಳೆಯುಲು ಸಹಾಯ ಮಾಡುವ ಕ್ರೀಮ್ ಒಂದನ್ನು ಸಂಶೋಧನೆ ಮಾಡಲಾಗಿದೆ.

ಸಂಶೋಧಕರ ಪ್ರಕಾರ ಕ್ಯಾನ್ಸರ್ ಚಿಕಿತ್ಸೆಯ ಹೊತ್ತು ಕೂದಲು ಉದುರುತ್ತದೆ. ಆದಾಗ್ಯೂ, ಕೆಲವೊಂದು ಔಷಧಿಗಳು ಕೂದಲು ಬೆಳೆಯುವ ಕಿಣ್ವ (ಎನ್‌ಜೈಮ್)ಗಳನ್ನು ಪ್ರೇರೇಪಿಸಿ ಕೂದಲು ಬೆಳೆಯುವಂತೆ ಮಾಡುತ್ತವೆ.

ಕೊಲಂಬಿಯ ವಿಶ್ವವಿದ್ಯಾನಿಲಯ ಮೆಡಿಕಲ್ ಸೆಂಟರ್‌ನ ಆಂಜೆಲಾ ಎಂ ಕ್ರಿಸ್ಟಿನೋ ಮತ್ತು ಸಹೋದ್ಯೋಗಿಗಳು  ಕೂದಲು ಮತ್ತೆ ಬೆಳೆಯುವಂತೆ ಮಾಡುವ  ಔಷಧಿಯೊಂದನ್ನು ಕಂಡುಹಿಡಿದು ಸಂಶೋಧನೆ ನಡೆಸಿದ್ದಾರೆ. ಜಾನಸ್ ಕಿನಾಸ್ ( JAK) ಇನ್‌ಹಿಬಿಟರ್ಸ್  ಎಂಬ ಎನ್‌ಜೈಮ್  ಈ ಔಷಧಿಯಲ್ಲಿದ್ದು, ಇದು ಕೂದಲು ಬೆಳೆಯಲು ಸಹಕಾರಿಯಾಗಿದೆ.

ಆದ್ದರಿಂದ ಇದನ್ನು ಬೊಕ್ಕತಲೆಗೆ ಔಷಧಿಯಾಗಿ ಬಳಸುವ ಬಗ್ಗೆ ಈಗ ಚಿಂತನೆ ನಡೆಸಲಾಗಿದೆ. ಈಗಾಗಲೇ ಈ ಔಷಧಿಗೆ ಯುಎಸ್ ಫುಡ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಅಂಗೀಕಾರ ಲಭಿಸಿದೆ.

Write A Comment