ಕರ್ನಾಟಕ

ಇಡ್ಲಿಭಾಗ್ಯ ಹಾಗೂ ನೀರಿನ ಭಾಗ್ಯಕ್ಕಾಗಿ ಕ್ಯಾಂಟೀನ್ ತೆರೆಯಲು ಸರ್ಕಾರಕ್ಕೆ ಶಿಫಾರಸು : ಸಿ.ಎಂ.ಇಬ್ರಾಹಿಂ

Pinterest LinkedIn Tumblr

ibrfiಬೆಂಗಳೂರು, ಡಿ.11- ತಮಿಳುನಾಡಿನಲ್ಲಿ ಜಾರಿ ಯಲ್ಲಿರುವ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯದಲ್ಲೂ ಇಡ್ಲಿಭಾಗ್ಯ ಹಾಗೂ ನೀರಿನ ಭಾಗ್ಯ ನೀಡಲು ಕ್ಯಾಂಟೀನ್ ಪ್ರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇಂದಿಲ್ಲಿ ತಿಳಿಸಿದರು.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಆಯವ್ಯಯದಲ್ಲಿ ಕ್ಯಾಂಟಿನ್ ಆರಂಭಿಸುವಂತೆ ಶಿಫಾರಸು ಮಾಡಲಾಗಿತ್ತು. ಮುಂದಿನ ವರ್ಷದ ಆಯವ್ಯಯದ ಪೂರ್ವ ಸಿದ್ಧತೆ ಸಂದರ್ಭದಲ್ಲಿ ಕ್ಯಾಂಟಿನ್ ತೆರೆಯುವಂತೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು. ಆಸ್ಪತ್ರೆ, ಬಸ್ ನಿಲ್ದಾಣ, ಶಾಲಾ- ಕಾಲೇಜುಗಳ ಬಳಿ ಕ್ಯಾಂಟಿನ್ ತೆರೆಯುವ ಉದ್ದೇಶ ವಿದೆ. 5ರೂ. ರಿಯಾಯ್ತಿ ದರದಲ್ಲಿ ಇಡ್ಲಿ ಭಾಗ್ಯ ನೀಡಲು ಉದ್ದೇಶಿ ಸಿದ್ದು, ರಿಯಾಯ್ತಿ ದರದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯ ಸರ್ಕಾರ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರನ್ನು  ನೀಡಬಹುದು. ಇದರಿಂದ ಹೊಸ ಉದ್ಯೋಗ ಸೃಷ್ಟಿಯಾಗು ತ್ತದೆ. ಈಗ ಬಹುರಾಷ್ಟ್ರೀಯ ಕಂಪೆನಿಗಳು ಸರಬರಾಜು ಮಾಡುವ ಶುದ್ಧಕುಡಿಯುವ ನೀರು ದುಬಾರಿಯಾಗಿದೆ ಎಂದು ಹೇಳಿದರು. ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಸೋರಿಕೆ ತಡೆದು ರಾಜ್ಯದ ಆರ್ಥಿಕ ಸಂಪನ್ಮೂಲ ಹೆಚ್ಚಳಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು. ಬಜೆಟ್ ಪೂರ್ವ ಸಿದ್ಧತೆ ಸಂದರ್ಭದಲ್ಲಿ ಮಂಡಳಿ ಶಿಫಾರಸುಗಳನ್ನು ಮಾಡಲಿದೆ. ಖನಿಜ ಸಂಪತ್ತಿನ ಬಳಕೆ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಏಕರೂಪ ನೀತಿಯೊಂದನ್ನು ಜಾರಿಗೆ ತರಬೇಕೆಂದು ಇಬ್ರಾಹಿಂ ಹೇಳಿದರು. ಕಸದ ಸಮಸ್ಯೆಗೆ ಮುಕ್ತಿ:ಬೆಂಗಳೂರಿನಲ್ಲಿ ಪದೇ ಪದೇ ತಲೆದೋರುತ್ತಿರುವ ಕಸದ ಸಮಸ್ಯೆಯನ್ನು ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಬಗೆಹರಿಸಲಾಗುತ್ತದೆ. ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಕಲ್ಪಿಸಲು ಒತ್ತು ನೀಡಲಾಗುವುದು. ಇದಕ್ಕಾಗಿ ಬೆಂಗಳೂ ರಿಗೆ ಜಾರ್ಜ್ ಅವರನ್ನು ಸಚಿವರನ್ನಾಗಿ ಮಾಡಿದ್ದು, ಅವರು ನಿರಂತರವಾಗಿ ಸಭೆಗಳನ್ನು ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಚುನಾವಣೆ ವೇಳೆಗೆ ರಸ್ತೆ, ಕಸ, ಒಳಚರಂಡಿ ಸಮಸ್ಯೆಗೆ ಪರಿಹಾರ ಒದಗಿಸಿ ಮತಯಾಚನೆ ಮಾಡಬೇಕು. ಇದಕ್ಕಾಗಿ ಸಮಾರೋಪಾದಿಯಲ್ಲಿ  ಕೆಲಸ ಮಾಡಬೇಕಿದೆ. ಬೆಂಗಳೂರು ವಿಚಾರದಲ್ಲಿ ಮುಖ್ಯಮಂತ್ರಿ ಅವರು ಆಸಕ್ತಿ ವಹಿಸಿದ್ದು, ಖುದ್ದುನಿರ್ವಹಣೆ ಮಾಡುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ಕಸದ ಸಮಸ್ಯೆ ಶೇ.70ರಿಂದ 80ರಷ್ಟು ಪರಿಹಾರವಾಗಲಿದ್ದು, ಇನ್ನೆರಡು ವರ್ಷಗಳಲ್ಲಿ ಪೂರ್ಣವಾಗಿ ಬಗೆಹರಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕಸದ ಸಮಸ್ಯೆ ಇಂದು, ನಿನ್ನೆಯದಲ್ಲ, 15-20 ವರ್ಷಗಳಿಂದ ಹಾಕಿರುವ ತಿಪ್ಪೆ. ಅದು ನಮ್ಮ ತಲೆ ಮೇಲಿದೆ. ಹಿಂದಿನ ಸರ್ಕಾರ ಹಾಕಿದ ತಿಪ್ಪೆಯ ಹೊರೆಯನ್ನು ತಮಗೆ ಹೊರಿಸುವುದು ಸರಿಯಲ್ಲ. ಕಸವನ್ನು ಹಾಕಿಸಿಕೊಳ್ಳಲು ಯಾವ ಊರಿನವರೂ ಸಿದ್ಧರಿಲ್ಲ. ಎಲ್ಲೆಡೆಯೂ ವಿರೋಧವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟು ಪರಿಹಾರವಾಗಿದೆ. ಎಲ್ಲಾ ಏಜೆನ್ಸಿಗಳನ್ನು ಒಂದು ಗೂಡಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

Write A Comment