ಅಂತರಾಷ್ಟ್ರೀಯ

ಟುಕ್ ಟುಕ್ ಡ್ರೆಸ್

Pinterest LinkedIn Tumblr

Tuk-Tuk-Dressಚಿತ್ರ ನೋಡಿಯೇ ಗಾಬರಿಯಾಗಿರಬಹುದು? ಆಟೋನೇ ಮೈಮೇಲೆ ಬಂದ ಹಾಗಿದೆಯೋ  ಅಥವಾ ಆಟೋ ಮುಂದೆ ಹುಡುಗಿ ನಿಂತಿದ್ದಾಳೋ ಎಂದು ಕಣ್ಣು ಸರಿಮಾಡಿಕೊಂಡು ನೋಡುತ್ತಲೂ ಇರಬಹುದು.

ಥೈಲ್ಯಾಂಡ್‍ನಲ್ಲಿ ಟುಕ್ ಟುಕ್ ಅಂದ್ರೆ ನಮ್ಮ ದೇಶದ ಆಟೋ. ಇದರಿಂದ ಸ್ಫೂರ್ತಿ ಪಡೆದಿರುವ ಡಿಸೈನರ್ ಹಿನ್‍ಕ್ರಿತ್ ಪಟ್ಟಾಬೋರಿಬೂನ್‍ಕುಲ್, ಟುಕ್ ಟುಕ್ ಹೆಸರಿನ ಡ್ರೆಸ್ ಸಿದ್ಧಪಡಿಸಿದ್ದಾನೆ. ಅದೇ ನೀವು ನೋಡುತ್ತಿರುವ ಡ್ರೆಸ್. ಈ ಡ್ರೆಸ್ ಮೂಲಕ ಆಟೋವನ್ನು ಬೀದಿಯಿಂದ ಮಿಸ್ ಯೂನಿವರ್ಸ್ ರ್ಯಾಂಪ್ ಮೇಲೆ ತಂದಿದ್ದ ಹಿನ್‍ಕ್ರಿತ್. ಮಿಸ್‍ಯೂನಿವರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಮಿಸ್ ಥೈಲ್ಯಾಂಡ್ ಅನಿಪೊರ್ನ್ ಎಂಬ ಸುಂದರಿ ಈ ಉಡುಪನ್ನು ಧರಿಸಿ ರ್ಯಾಂಪ್ ಮೇಲೆ ನಡೆಯಲಿದ್ದಾರೆ. ಓಡಲಿದ್ದಾರೆ ಎಂದೂ ಹೇಳಬಹುದೇನೊ!

ಸುಮಾರು 7 ಕೆಜಿ ತೂಕದ ಈ ಡ್ರೆಸ್‍ಗೆ 8 ಕಡೆ ಜೋಡಿಸುವ ಬಿಂದುಗಳಿವೆ. ಹಾಗಾಗಿ ವಾಡ್ರ್ ರೋಬ್ ಮಾಲ್ ಫಂಕ್ಷನ್‍ಗೆ ಅವಕಾಶವಿಲ್ಲ. ಬಹುಶಃ ನಟ್‍ಬೋಲ್ಟ್‍ಗಳನ್ನೇ ಬಳಸಿರಬೇಕು ಎಂದು ಕುಹಕವಾಡಬಹುದು. ಹಗುರವಾದ ಪ್ಲಾಸ್ಟಿಕ್ ಬಳಸಿ ಈ ಉಡುಪನ್ನು ಅಚ್ಚು ಹಾಕುವ ಮೂಲಕ ಸಿದ್ಧ ಮಾಡಲಾಗಿದೆ. ಹೆಡ್ ಲೈಟ್, ಇಂಡಿಕೇಟರ್‍ಗಳು, ಹ್ಯಾಂಡಲ್ ಬಾರ್ ಇದೆ.

ಮಾಡೆಲ್ ಹೆಜ್ಜೆ ಹಾಕುತ್ತಿದ್ದಂತೆ ಹೆಡ್‍ಲೈಟ್ ಬೆಳಗುತ್ತದೆ. ನೋಡುವವರು ಕಣ್ಣು ಕೋರೈಸುತ್ತವೆ. ಡಿಸೆಂಬರ್ 20ರಂದು ಲಾಸ್‍ವೆಗಾಸ್‍ನಲ್ಲಿ ನಡೆಯುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಈ ಉಡುಪು ರ್ಯಾಂಪ್‍ಗೆ ಇಳಿಯಲಿದೆ. ಸದ್ಯ ಥೈಲ್ಯಾಂಡಿನ ಶೋಗಳಲ್ಲಿ ಟೆಸ್ಟ್ ಮಾಡಲಾಗುತ್ತಿದೆ.

Write A Comment