ಅಂತರಾಷ್ಟ್ರೀಯ

ಮಾಹಿತಿಯನ್ನು ಹರಡಿ, ಸೂಕ್ಷ್ಮ ಜೀವಾಣುಗಳನ್ನಲ್ಲ

Pinterest LinkedIn Tumblr

hand-wash

ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತಹ ಸೋಂಕುಗಳು ತಾಯ್ತಂದೆಯರು, ವಿಮಾದಾರರು, ಸರ್ಕಾರಗಳು ಮತ್ತು ನಿಯಂತ್ರಣ ಸಂಸ್ಥೆಗಳ ಗಮನವನ್ನು ಇನ್ನಿಲ್ಲದಂತೆ ಸೆಳೆಯುತ್ತಿವೆ. ಇದಕ್ಕೆ ಕಾರಣ, ರೋಗ, ಸಾವಿನ ಸಂಖ್ಯೆ ಮತ್ತು ಚಿಕಿತ್ಸೆಗಳ ವೆಚ್ಚ. ಜೊತೆಗೆ ಇವೆಲ್ಲವನ್ನೂ ತಡೆಗಟ್ಟಬಹುದು ಎಂಬ ಅರಿವೂ ಹೆಚ್ಚುತ್ತಿರುವುದು. ಸೋಂಕು ಕಾಯಿಲೆಗಳಿಗೆ ಸಂಬಂಧಿಸಿದಂತೆ ಶರೀರ ವಿಜ್ಞಾನವನ್ನು (pathophysiology) ಅರ್ಥಮಾಡಿಕೊಳ್ಳುವಲ್ಲಿ ಅಭೂತಪೂರ್ವ ಮುನ್ನಡೆಗಳಾಗುತ್ತಿವೆ. ಜಾಗತಿಕವಾಗಿ ಬಹು-ಔಷಧಿಗಳಿಗೆ ಪ್ರತಿರೋಧಕ ಶಕ್ತಿಯುಳ್ಳ ಸೋಂಕುಗಳೂ ವ್ಯಾಪಕವಾಗಿ ಹರಡುತ್ತಿವೆ. ಈ ಎಲ್ಲ ಅಂಶಗಳು ಮತ್ತು ಹೊಸ ಪ್ರತಿ-ಸೂಕ್ಷ್ಮಜೀವಿಗಳ (antimicrobials)  ಅಲಭ್ಯತೆಯಿಂದಾಗಿ ಆಧುನಿಕ ದೈನಂದಿನ ಜೀವನದಲ್ಲಿ ಸೋಂಕು ತಡೆಗಟ್ಟುವ ಮೂಲ ಪದ್ಧತಿಗಳ ಬಗ್ಗೆ ಮತ್ತೊಮ್ಮೆ ಅವಲೋಕಿಸಬೇಕಾಗಿ ಬಂದಿದೆ.

ಇಂದಿನ ಆರೋಗ್ಯ ವ್ಯವಸ್ಥೆಗಳಲ್ಲಿ, ಸೋಂಕು ಹರಡಿದರೆ ಜಾಗತಿಕವಾಗಿ ಕೋಟ್ಯಂತರ ಜನರನ್ನು ಬಾಧಿಸುತ್ತದೆ.  Nosocomial ಸೋಂಕುಗಳು ಅಥವಾ ಆಸ್ಪತ್ರೆಯಿಂದ ಬಂದ ಸೋಂಕು ಎಂದರೆ ಆಸ್ಪತ್ರೆಗೆ ಸೇರಿದ 48 ಗಂಟೆಗಳ, ಬಿಡುಗಡೆಯಾದ 3 ದಿನಗಳ ಅಥವಾ ಶಸ್ತ್ರಚಿಕಿತ್ಸೆಯಾದ 30 ದಿನಗಳ ಒಳಗೆ ಬರುವಂತಹ ಸೋಂಕು.

ಯಾವುದೇ ಸಂದರ್ಭದಲ್ಲಿ ಜಾಗತಿಕವಾಗಿ 14+ ಲಕ್ಷ ಜನರು ಆಸ್ಪತ್ರೆಯಲ್ಲಿ ಬರುವ (Nosocomial) ಸೋಂಕುಗಳಿಂದ ಬಾಧಿತರಾಗಿರುತ್ತಾರೆ ( ವಿಶ್ವ ಆರೋಗ್ಯ ಸಂಸ್ಥೆ: ಆರೋಗ್ಯ ರಕ್ಷಣೆಯಲ್ಲಿ ಕೈಗಳ ನೈರ್ಮಲ್ಯದ ಬಗ್ಗೆ  ಮಾರ್ಗದರ್ಶಿಕೆಗಳು (ಮುಂದುವರಿದ ಕರಡು); ಒಂದು ಸಾರಾಂಶ, ಜಿನೀವಾ, ವಿಶ್ವ ಆರೋಗ್ಯ ಸಂಸ್ಥೆ, 2005). ಜೊತೆಗೆ ಆಸ್ಪತ್ರೆಯಲ್ಲಿ ಬರುವ ಸೋಂಕುಗಳು ವರ್ಷಕ್ಕೆ 20 ಲಕ್ಷ ಪ್ರಕರಣಗಳು ಮತ್ತು ಸುಮಾರು 80,000 ಸಾವುಗಳಿಗೆ ಕಾರಣವಾಗುತ್ತಿವೆ (ಜಾಗತಿಕ ರೋಗಿ ಸುರಕ್ಷತೆ ಸವಾಲು ಕಾರ್ಯಕ್ರಮ (2005-2006)) ಅಬಾಧಿತ ರೋಗಿಗೆ ಹೋಲಿಸಿದರೆ, ಆಸ್ಪತ್ರೆಯಿಂದ ಬಂದ ಸೋಂಕಿನ (HAI) ಬಾಧೆಗೊಳಗಾದ ಒಬ್ಬ ರೋಗಿ ಸರಾಸರಿ 2.5 ಪಟ್ಟು ಹೆಚ್ಚು ಕಾಲ ಮತ್ತು ಹಣ ಆಸ್ಪತ್ರೆಯಲ್ಲಿ ಕಳೆಯಬೇಕಾಗುತ್ತದೆ. (Ken Inweregbu, Jayshree Dave, and Alison Pittard/Nosocomial infections Contin Educ Anaesth Crit Care Pain (2005) 5 (1): 14-17)

ಡಾ. ಪ್ರದೀಪ್ ರಂಗಪ್ಪ, ಇಂಟೆನ್ಸಿವಿಸ್ಟ್, ಕೊಲಂಬಿಯಾ ಏಷ್ಯಾ, ಹೇಳುತ್ತಾರೆ, “ಆಸ್ಪತ್ರೆಯಿಂದ ಬಂದ ಸೋಂಕುಗಳಲ್ಲಿ ಮೂರನೇ ಒಂದು ಭಾಗದಷ್ಟನ್ನು ಸೂಕ್ತ ಸೋಂಕು ನಿಯಂತ್ರಣ ಕ್ರಮಗಳಿಂದ ತಡೆಯಬಹುದು.” ಒಬ್ಬ ರೋಗಿ ಊಂI ಗೆ ತುತ್ತಾಗಲು ಹಲವಾರು ಕಾರಣಗಳಿವೆ. ಅದರಲ್ಲಿ ಒಂದು, ಹಸ್ತಗಳ ಕಳಪೆ ನೈರ್ಮಲ್ಯ. ಆಸ್ಪತ್ರೆಗಳಲ್ಲಿ ಶೇ. 40 ರಷ್ಟು ಸೋಂಕುಗಳು ಬರಲು ಇದೇ ಕಾರಣ. (Niger Med J. 2012 Apr-Jun; 53(2): 59–64.)

ಈಗಂತೂ ನಿರ್ವಿವಾದಿತ ಸಾಕ್ಷ್ಯಾಧಾರ ದೊರಕಿದೆ, ಕೈಗಳನ್ನು ನಿರ್ಮಲವಾಗಿಟ್ಟುಕೊಂಡರೆ ಸೋಂಕುಗಳು ಹರಡುವ ಅಪಾಯ ಕಡಿಮೆಯಾಗುತ್ತದೆ. ಸೋಂಕು ನಿಯಂತ್ರಣ ಚಟುವಟಿಕೆಗಳಲ್ಲಿ ಕೈಗಳ ನೈರ್ಮಲ್ಯಕ್ಕೆ ಅತ್ಯಂತ ಮಹತ್ತ್ವವಿದೆ. ಆರೋಗ್ಯ ರಕ್ಷಣೆ ಸಂಬಂಧಿತ ಸೋಂಕುಗಳು (HCAI) ಹೆಚ್ಚುತ್ತಿರುವುದರಿಂದ ಕಾಯಿಲೆಗಳ ತೀವ್ರತೆ ಮತ್ತು ಚಿಕಿತ್ಸೆಗಳ ವೆಚ್ಚಗಳು ಹೆಚ್ಚುತ್ತಿವೆ ಅಲ್ಲದೆ, ಬಹು-ಔಷಧಿಗಳನ್ನು ಪ್ರತಿರೋಧಿಸುವ (MDR)  pathogen ಸೋಂಕುಗಳು ಹೆಚ್ಚುತ್ತಿವೆ. ಆರೋಗ್ಯ ರಕ್ಷಣೆ ಒದಗಿಸುವವರು (HCP) ಈಗ ಕೈಗಳ ನೈರ್ಮಲ್ಯದಂತಹ ನೈರ್ಮಲ್ಯದ ಮೂಲ ಪಾಠಗಳಿಗೆ ಮತ್ತೆ ಮೊರೆಹೋಗಿದ್ದಾರೆ. ಇದಕ್ಕೆ ಕಾರಣ ಕೈಗಳನ್ನು ನಿರ್ಮಲವಾಗಿಟ್ಟುಕೊಂಡರೆ ಸಾಕು ಆರೋಗ್ಯ ರಕ್ಷಣೆ ಸೌಲಭ್ಯಗಳಲ್ಲಿ (HCF) ಸೋಂಕುಗಳು ಹರಡುವ ಅಪಾಯ ಬಹಳಷ್ಟು ಕಡಿಮೆಯಾಗುತ್ತವೆ ಎಂದು ರುಜುವಾತಾಗಿದೆ.

ಡಾ. ಶಿವ ಪ್ರಸಾದ್, ಇಂಟೆನ್ಸಿವಿಸ್ಟ್, ನಾರಾಯಣ ಹೆಲ್ತ್ ಹೇಳುತ್ತಾರೆ, “ಕೈಗಳನ್ನು ತೊಳೆಯುವುದು ಒಂದು ಶೈಕ್ಷಣಿಕ ಆದ್ಯತೆಯಾಗಬೇಕು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೈಗಳನ್ನು ಸೋಂಕಿಲ್ಲದಂತೆ ಮಾಡಿಕೊಳ್ಳುವುದರ ಮಹತ್ತ್ವದ ಬಗ್ಗೆ ತಿಳಿಸಬೇಕು. ಸೋಂಕನ್ನು ನಿಯಂತ್ರಿಸುವುದರ ಬಗ್ಗೆ ಒತ್ತುಕೊಡಬೇಕು. ಈ ಬಾಧ್ಯತೆಯನ್ನು ಸಂಸ್ಥೆಯ ಹಿರಿಯ ಸದಸ್ಯರಿಗೆ ವಹಿಸಬೇಕು, ಸೂಕ್ತ ಉಸ್ತುವಾರಿ ಮತ್ತು ಪರಿಣಾಮಕಾರಿ ಹಿಮ್ಮುಖ ವರದಿಗಳಿಂದ ನಿರಂತರ ಮೇಲ್ವಿಚಾರಣೆ ಸಾಧ್ಯವಾಗುತ್ತದೆ. ಇಂತಹ ಕ್ರಮಗಳನ್ನು ಭಾರತೀಯ ಆಸ್ಪತ್ರೆಗಳಲ್ಲಿ ಅಳವಡಿಸಬೇಕು.”

ಭಾರತದಲ್ಲಿ ನೈರ್ಮಲ್ಯ ಎನ್ನುವುದು ಸಂಪ್ರದಾಯಸ್ಥ ರೂಢಿಯಲ್ಲಿ ಬಂದಿದ್ದರೂ, ಶಾಲೆ-ಸಮುದಾಯಗಳಲ್ಲಿ ಅತಿಸಾರ ಇತ್ಯಾದಿಗಳನ್ನು ಕಡಿಮೆ ಮಾಡುವ ಸಲುವಾಗಿ ಅದರ ಬಗ್ಗೆ ಒತ್ತುಕೊಡುತ್ತಿದ್ದರೂ  ಊಅಈಗಳಲ್ಲಿ ಕೈಗಳ ನೈರ್ಮಲ್ಯದ ಬಗ್ಗೆ ಹೆಚ್ಚಿನ ಅರಿವಿಲ್ಲ. ಕೈಗಳ ಸೋಂಕುಗಳು ಹರಡುತ್ತಿರುವ ಬಗ್ಗೆ ಬೇಕಾದಷ್ಟು ವರದಿಗಳಿವೆ. ಆದರೆ ದೇಶಾದ್ಯಂತ ಕೈಗಳ ನೈರ್ಮಲ್ಯ ಪರಿಸ್ಥಿತಿಯನ್ನು ಸುಧಾರಿಸಲು ಆಗುತ್ತಿರುವ ಪ್ರಯತ್ನಗಳು ಅಲ್ಲೊಂದು ಇಲ್ಲೊಂದು.

“ಈಗ ಆರೋಗ್ಯ ರಕ್ಷಣೆ ವೃತ್ತಿಪರರಲ್ಲಿ ಅರಿವು ಹೆಚ್ಚುತ್ತಿದೆ. ಆದ್ದರಿಂದ ವೃತ್ತಿಪರ ಆರೋಗ್ಯ ರಕ್ಷಕರಿಂದ ಸೋಂಕು ಹರಡುವ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ ರೋಗಿಯನ್ನು ನೋಡಲು ಬರುವ ಕುಟುಂಬ ಸದಸ್ಯರು ಮತ್ತು ಬಂಧುಗಳು ಅದರಲ್ಲೂ ಐಸಿಯು ವಿಷಯದಲ್ಲಿ ಹೆಚ್ಚು ಜಾಗ್ರತರಾಗಬೇಕಿದೆ,” ಎನ್ನುತ್ತಾರೆ ಡಾ. ಪ್ರದೀಪ್ ರಂಗಪ್ಪ.

ಕೈತೊಳೆಯುವುದು ಹೇಗೆ?

ಕೈಗಳು ಗಲೀಜಾಗಿದೆ ಎಂದು ಕಂಡಾಗ ಕೈತೊಳೆಯಿರಿ ಅಥವಾ ಹ್ಯಾಂಡ್‍ರಬ್ ಬಳಸಿ.

ಕೈತಿಳೆಯಬೇಕಾದ ಅವಧಿ (ಹೆಜ್ಜೆಗಳು 2-7): 15-20 ಸೆಕೆಂಡುಗಳು

ಇಡೀ ಪ್ರಕ್ರಿಯೆಯ ಅವಧಿ: 40-60 ಸೆಕೆಂಡುಗಳು

0 – ಮೊದಲು ಕೈಗಳನ್ನು ನೀರಿನಿಂದ ಒದ್ದೆಮಾಡಿಕೊಳ್ಳಿ

1 – ಕೈಗಳನ್ನು ಮುಚ್ಚಲು ಸಾಕಷ್ಟು ಸಾಬೂನನ್ನು ಹಚ್ಚಿಕೊಳ್ಳಿ.

2 – ಅಂಗೈಗಳನ್ನು ಪರಸ್ಪರ ಉಜ್ಜಿ

3 – ಬಲ ಅಂಗೈಯನ್ನು ಎಡ ಹಿಂಗೈ ಮೇಲಿಡಿ, ಬೆರಳುಗಳು ಬೆಸೆದಿರಲಿ; ಹಾಗೇ ಬಲ ಹಿಂಗೈಗೂ.

4 – ಅಂಗೈ ಮೇಲೆ ಅಂಗೈ; ಬೆರಳುಗಳು ಬೆಸೆದಿರಲಿ.

5 – ಬೆರಳುಗಳ ಹಿಂಭಾಗವನ್ನು ಅಂಗೈಗೆ ಉಜ್ಜಿ. ಬೆರಳುಗಳು ಪರಸ್ಪರ ಬೆಸೆದಿರಲಿ.

6 – ಬಲಗೈ ಹೆಬ್ಬೆರಳಿನಿಂದ ಎಡ ಹಿಂಗೈ ಮೇಲೆ ವೃತ್ತಾಕಾರವಾಗಿ ಉಜ್ಜಿ; ಹಾಗೇ ಬಲ ಹಿಂಗೈಗೂ.

7 – ಬಲಗೈ ಬೆರಳುಗಳನ್ನು ಒಟ್ಟಾಗಿಸಿ ಎಡ ಅಂಗೈ ಮೇಲೆ ಮುಂದಕ್ಕೆ ಹಿಂದಕ್ಕೆ ಉಜ್ಜಿ. ಹಾಗೇ ಬಲಗೈಗೂ.

8 – ಕೈಗಳನ್ನು ನೀರಿನಲ್ಲಿ ತೊಳೆಯಿರಿ.

9 – ಕೈಗಳನ್ನು ಟವೆಲಿನಲ್ಲಿ ಒಣಗಿಸಿ. ಒಂದು ಸಲಕ್ಕೆ ಒಂದು ಟವೆಲ್.

10 – ನಲ್ಲಿಯನ್ನು ನಿಲ್ಲಿಸಲು ಟವೆಲ್ ಬಳಸಿ.

11 – ಈಗ ನಿಮ್ಮ ಕೈಗಳು ಸುರಕ್ಷಿತ!

ಅಸ್ಪತ್ರೆಯಿಂದ ಬರುವ ಸೋಂಕು (HAI) ಅಪಾಯ ದರಗಳು:

ಅಮೆರಿಕೆ: 20ರಲ್ಲಿ ಒಬ್ಬರಿಗೆ

ಯೂರೋಪ್ಯ ರಾಷ್ಟ್ರಗಳು: 10 ರಲ್ಲಿ ಒಬ್ಬರು 1 in 10 in an

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು: 4ರಲ್ಲಿ ಒಬ್ಬರು

References:

1. World Health Organization. WHO guidelines on hand hygiene in health care (advanced draft): a summary. Geneva, World Health Organization, 2005

2. Global patient safety challenge program (2005- 2006)

3. JAMA 284(4), 2000

4. Ken Inweregbu, Jayshree Dave, and Alison Pittard/Nosocomial infections Contin Educ Anaesth Crit Care Pain (2005) 5 (1): 14-17

5.  Niger Med J. 2012 Apr-Jun; 53(2): 59–64.

Write A Comment