ಅಂತರಾಷ್ಟ್ರೀಯ

ಪಾಕ್‌: 5 ವರ್ಷದಲ್ಲಿ ಭಯೋತ್ಪಾದನೆಗೆ 8,500 ಜನ ಬಲಿ

Pinterest LinkedIn Tumblr

21

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಕಳೆದ ಐದು ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರು ಸೇರಿದಂತೆ 8,500 ಜನರು ಬಲಿಯಾಗಿದ್ದಾರೆ.

ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನಲ್ಲಿ ಶುಕ್ರವಾರ ಆಂತರಿಕ ಸಚಿವಾಲಯವು ಪ್ರಶ್ನೋತ್ತರದ ವೇಳೆ ಈ ವಿಷಯ ತಿಳಿಸಿದೆ.

ಕಳೆದ ಐದು ವರ್ಷಗಳಲ್ಲಿ ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ 5,532 ನಾಗರಿಕರು ಹಾಗೂ 3,157 ಯೋಧರು ಮೃತಪಟ್ಟಿದ್ದಾರೆ. ಅದೇ ರೀತಿ 10,195 ನಾಗರಿಕರು ಹಾಗೂ 5,988 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಪ್ರಕ್ಷುಬ್ಧ ಪೀಡಿತ ಸಂಯುಕ್ತ ಆಡಳಿತದ ಬುಡಕಟ್ಟು ಪ್ರದೇಶಗಳಲ್ಲಿ (ಎಫ್‌ಎಟಿಎ) ಭದ್ರತಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಅಸುನೀಗಿದ್ದಾರೆ. ಈ ಪ್ರದೇಶಗಳಲ್ಲಿ 1487 ಭದ್ರತಾ ಸಿಬ್ಬಂದಿ ಮೃತಪಟ್ಟು, 2224 ಮಂದಿ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ 1,470 ನಾಗರಿಕರು ಸತ್ತಿದ್ದು, 2,761 ಜನರು ಗಾಯಗೊಂಡಿದ್ದಾರೆ.

173 ಉಗ್ರರಿಗೆ ಗಲ್ಲು: ಇದೇ ಐದು ವರ್ಷಗಳ ಅವಧಿಯಲ್ಲಿ ಒಟ್ಟು 173 ಉಗ್ರರನ್ನು ಗಲ್ಲಿಗೇರಿಸಲಾಗಿದೆ. 200 ಭಯೋತ್ಪಾದಕರ ಮರಣದಂಡನೆ ಶಿಕ್ಷೆ ಜಾರಿಗೊಳಿಸಬೇಕಿದೆ.

Write A Comment