ಅಂತರಾಷ್ಟ್ರೀಯ

ಒಂದೇ ವಾರದಲ್ಲಿ ಅಪ್ಪನಾಗಿ, ಅಜ್ಜನೂ ಆದ 23ರ ಯುವಕ…!

Pinterest LinkedIn Tumblr

32

ವಾಷಿಂಗ್‌ಟನ್, ನ.22: ಈತನ ಹೆಸರು ಟಾಮಿ ಕೊನ್ನೊಲಿ, ವಯಸ್ಸು 23. ಕಾಲೇಜು ವಿದ್ಯಾರ್ಥಿ. ಹಾಗೇ ಒಳ್ಳೆ ಅಥ್ಲೀಟ್ ಕೂಡ. ಈ ವ್ಯಕ್ತಿ ಕೇವಲ ಒಂದೇ ವಾರದಲ್ಲಿ ಅಪ್ಪನಾದವ, ಅಜ್ಜನೂ ಆದ. ಇದು ಹೇಗೆ ಸಾಧ್ಯ ಅಂತೀರಾ….? ಹೌದು… ಸಾಧ್ಯವಾಗಿದೆ. ಅದು ಸಾಧ್ಯವಾಗಿದ್ದು ಹೀಗೆ…. 17 ರ ಹರೆಯದ ಇವನ ಸೋದರ ಸಂಬಂಧಿ ಅನಾಥೆ. ಅವಳಿಗೆ ಯಾರೂ ಇಲ್ಲ. ಅಷ್ಟರಲ್ಲಿ ಆಕೆ ಗರ್ಭಿಣಿಯಾಗಿದ್ದಳು. ನಂತರ ಅವಳ ಸ್ಥಿತಿ ತೀರಾ ಚಿಂತಾಜನಕವಾಯಿತು. ಒಮ್ಮೆ ಆ ಹುಡುಗಿ ಕೊನ್ನೋಲಿಗೆ ಫೋನ್ ಮಾಡಿ, ತನ್ನ ದೀನ ಸ್ಥಿತಿ ಬಗ್ಗೆ ಹೇಳಿಕೊಂಡಳು. ಇದರಿಂದ ಮನನೊಂದ ಕೊನ್ನೋಲ್ ಹಿಂದೂ ಮುಂದು ನೋಡದೆ ಅವಳನ್ನು ಮನೆಗೆ ಕರೆ ತಂದ. ಬಹಳ ಅಕ್ಕರೆಯಿಂದ ಅವಳ ಪೋಷಣೆ ಮಾಡಿದ.

ಕೆಲವು ದಿನಗಳ ನಂತರ ಅವನಿಗೊಂದು ಆಲೋಚನೆ ಬಂತು. ಆ ಹುಡುಗಿಯನ್ನು ತನ್ನ ಮಗಳೆಂದು ಕಾನೂನು ಪ್ರಕಾರ ದತ್ತು ಪಡೆದ. ಕೊನ್ನೋಲಿ ದತ್ತು ಪಡೆದು ತಂದೆಯಾದ ಒಂದೇ ವಾರದಲ್ಲಿ ಸುಂದರವಾದ ಗಂಡು ಮಗುವಿಗೆ ಜನ್ಮವಿತ್ತಳು. ಸಾಕು ಮಗಳು, ಹಾಗಾಗಿ ತಂದೆಯಾದ ಒಂದೇ ವಾರದಲ್ಲಿ ಕೊನ್ನೋಲಿ ಗಂಡು ಮಗುವಿನ ಅಜ್ಜನೂ ಆದ.

ಟಾಮಿ ಕೊನ್ನೋಲಿ ಈಗ ತನ್ನ ಮುದ್ದಿನ ಸಾಕು ಮಗಳಿಗೆ ಅಕ್ಕರೆಯ ತಂದೆಯಾಗಿ, ಮೊಮ್ಮಗನಿಗೆ ನಲ್ಮೆಯ ಅಜ್ಜನಾದ ಸಂಭ್ರಮ. ಎಷ್ಟು ಜನಕ್ಕೆ ಇಂಥ ಭಾಗ್ಯ ಸಿಕ್ಕೀತು…? ಟಾಮಿ ಕೊನ್ನೋಲಿಯ ನಿಸ್ವಾರ್ಥ ಪ್ರೀತಿ, ಮಾನವೀಯತೆಯನ್ನು ಕಂಡು ಪ್ರಭಾವಿತರಾದ ಸ್ನೇಹಿತರು, ಆಪ್ತೇಷ್ಟರು ಕಳೆದ 15 ದಿನಗಳಲ್ಲಿ ಅವನ ಈ ಹೊಸ ಕುಟುಂಬದ ನಿರ್ವಹಣೆಗೆಂದು ಅವನ ಬ್ಯಾಂಕ್ ಖಾತೆಗೆ 40 ಸಾವಿರ ಡಾಲರ್ ಜಮಾ ಮಾಡಿದ್ದಾರಂತೆ.

Write A Comment