ಅಂತರಾಷ್ಟ್ರೀಯ

ಐಸಿಸ್ ಉಗ್ರರಿಂದ ಶ್ವೇತ ಭವನ ಸ್ಫೋಟಿಸುವ ಬೆದರಿಕೆ

Pinterest LinkedIn Tumblr

white-houseಅಮೆರಿಕಾದ ಶ್ವೇತಭವನವನ್ನೇ ಆತ್ಮಾಹುತಿ ದಾಳಿ ಮೂಲಕ ಸ್ಫೋಟಿಸುವುದಾಗಿ ಹೇಳಿರುವ ವೀಡಿಯೋ ಅನ್ನು  ಐಸಿಸ್ ಬಿಡುಗಡೆಗೊಳಿಸಿದೆ. ಜೊತೆಗೆ  ಫ್ರಾನ್ಸ್ ಮೇಲೆ ಮತ್ತಷ್ಟು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ..

ಪ್ಯಾರಿಸ್ ದಾಳಿ ನಡೆದ ವಾರದಲ್ಲಿಯೇ ಫ್ರಾನ್ಸ್ ಪೊಲೀಸರು ಐಸಿಸ್ ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಬೆನ್ನಲ್ಲೇ, ಐಸಿಸ್‌ ಆಕ್ರೋಶವೂ ಹೆಚ್ಚಾಗಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಯಾಂಡೆ ಅವರ ಹತ್ಯೆಗೆ ಪಣ ತೊಟ್ಟಿರುವುದಾಗಿ ಐಸಿಸ್ ಹೇಳಿಕೊಂಡಿದೆ.

ಐಸಿಸ್ ಉಗ್ರ ಸಂಘಟನೆ ಇರಾಕ್‌ನಲ್ಲಿ  ಬಿಡುಗಡೆ ಮಾಡಿದ ಅರೇಬಿಕ್ ಭಾಷೆಯಲ್ಲಿರುವ ಆರು ನಿಮಿಷಗಳ ವೀಡಿಯೋದಲ್ಲಿ ಕಳೆದ ವಾರ ನಡೆದ ಪ್ಯಾರಿಸ್ ಸ್ಫೋಟವನ್ನು ಶ್ಲಾಘಿಸಲಾಗಿದೆ. ಆದರೆ, ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮೇ ಐಎಸ್‌ನಿಂದ ಅಂಥ ಯಾವುದೇ ನಂಬಬಹುದಾದ ಬೆದರಿಕೆ ಬಂದಿಲ್ಲ ಎಂದಿದ್ದಾರೆ.

Write A Comment