ರಾಷ್ಟ್ರೀಯ

ಸೂಕ್ತ ತನಿಖೆ ನಂತರವೇ ರಾಹುಲ್ ಗಾಂಧಿ ವಿರುದ್ಧ ಆರೋಪ: ಸ್ವಾಮಿ

Pinterest LinkedIn Tumblr

swamyನವದೆಹಲಿ: ಬ್ರಿಟಿಷ್ ನಾಗರಿಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ ನಾಯಕ ಸುಬ್ರಮಣ್ಯಯನ್ ಸ್ವಾಮಿ ಅವರು, ಸೂಕ್ತ ತನಿಖೆಯ ಆಧಾರದ ಮೇಲೆಯೆ ನಾನು ಅವರ ವಿರುದ್ಧ ಆರೋಪ ಮಾಡಿದ್ದೇನೆ ಎಂದು ಶುಕ್ರವಾರ ಹೇಳಿದ್ದಾರೆ.

‘ನಾವು ಈಗಾಗಲೇ ತನಿಖೆ ಮಾಡಿದ್ದೇವೆ. ತನಿಖೆ ವೇಳೆ ರಾಹುಲ್ ಗಾಂಧಿ ಅವರು ಸ್ವತಃ ತಾವೇ ಒಂದಲ್ಲ ಐದು ಬಾರಿ ಬ್ರಿಟಿಷ್ ಪ್ರಜೆ ಎಂದು ಹೇಳಿಕೊಂಡಿರುವುದು ಪತ್ತೆಯಾಗಿದೆ’ ಎಂದು ಸ್ವಾಮಿ ತಿಳಿಸಿದ್ದಾರೆ.

ಬ್ರಿಟಿಷ್ ನಾಗರಿಕತ್ವ ಹೇಗೆ ಬಂತು ಎಂಬುದನ್ನು ರಾಹುಲ್ ಗಾಂಧಿ ಅವರು ಹೇಳಲಿ. ನಾನು ಆರೋಪ ಮಾಡುತ್ತಿಲ್ಲ. ಇರುವ ಸತ್ಯವನ್ನು ದೇಶದ ಜನತೆಯ ಗಮನಕ್ಕೆ ತರುತ್ತಿದ್ದೇನೆ ಎಂದಿದ್ದಾರೆ.

ಐಟಿ ರಿಟರ್ನ್ಸ್ ಸಲ್ಲಿಸುವಾಗ ಹಾಗೂ 2004, 2009ರಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ರಾಹುಲ್ ಗಾಂಧಿ ಅವರು ನಾಗರಿಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿಲ್ಲ. ಆದರೆ ಈಗ ಅದನ್ನು ಬಹಿರಂಗಪಡಿಸಲಿ ಎಂದು ಸ್ವಾಮಿ ಸವಾಲು ಹಾಕಿದ್ದಾರೆ.

Write A Comment