ರಾಷ್ಟ್ರೀಯ

ಮಹಿಳಾ ಎಸ್‌ಪಿಒ ತೊಡೆ ಮೇಲೆ ಕುಳಿತಿದ್ದ ಪೊಲೀಸ್ ಅಧಿಕಾರಿ ಅಮಾನತು

Pinterest LinkedIn Tumblr

spoಜಮ್ಮು: ರಾಜೋರಿ ಜಿಲ್ಲೆ ಪೊಲೀಸ್ ಠಾಣೆಯೊಂದರಲ್ಲಿ ಮಹಿಳಾ ವಿಶೆಷ ಪೊಲೀಸ್ ಅಧಿಕಾರಿ(ಎಸ್‌ಪಿಒ)ಯೊಬ್ಬರ ತೊಡೆ ಮೇಲೆ ಕುಳಿತಿದ್ದ ಪೊಲೀಸ್ ಅಧಿಕಾರಿಯನ್ನು ಶುಕ್ರವಾರ ಅಮಾನತು ಮಾಡಲಾಗಿದೆ.

ಮಹಿಳಾ ಪೊಲೀಸ್ ಅಧಿಕಾರಿ ತೊಡೆ ಮೇಲೆ ಮುಖ್ಯ ಪೊಲೀಸ್ ಪೇದೆ ಝಾಕಿರ್ ಹುಸ್ಸೇನ್ ಕುಳಿತಿದ್ದ ಎರಡು ಚಿತ್ರಗಳು ಸಾಮಾಜಿಕ ಜಾಲ ತಾಣ ಫೇಸ್‌ಬುಕ್ ಮತ್ತು ವಾಟ್ಸ್‌ಆಪ್‌ನಲ್ಲಿ ಭಾರಿ ಸುದ್ದಿ ಮಾಡಿದ್ದವು.

‘ಕಳೆದ ಆಗಸ್ಟ್‌ನಲ್ಲಿ ಈ ಘಟನೆ ನಡೆದಿದ್ದು, ತೊಡೆ ಮೇಲೆ ಕುಳಿತ ಚಿತ್ರಗಳು ನಮ್ಮ ಗಮನಕ್ಕೆ ಬಂದ ಕೂಡಲೇ ನಾವು ಬುಧಲ್ ಪೊಲೀಸ್ ಠಾಣೆಯ ಮುಖ್ಯ ಪೇದೆಯನ್ನು ಅಮಾನತು ಮಾಡಿದ್ದೇವೆ’ ಎಂದು ರಾಜೋರಿ-ಪೂಂಚ್ ವಿಭಾಗದ ಡಿಐಜಿ ಎಕೆ ಅತ್ರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಘಟನೆಗೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಮತ್ತು ಮಹಿಳಾ ಅಧಿಕಾರಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Write A Comment