ಅಂತರಾಷ್ಟ್ರೀಯ

ಲಂಡನ್- ಅಹಮದಾಬಾದ್ ನೇರ ವಿಮಾನ ಸೇವೆ: ಘೋಷಿಸಿದ ಮೋದಿ

Pinterest LinkedIn Tumblr

4 planeಲಂಡನ್: ಪ್ರಧಾನಿ ಮೋದಿ ಲಂಡನ್ ಮತ್ತು ಗುಜರಾತ್‌ನ ಅಹಮದಾಬಾದ್ ನಡುವೆ  ಮುಂದಿನ ತಿಂಗಳ ಡಿಸೆಂಬರ್‌ನಿಂದ  ನೇರ ವಿಮಾನಯಾನ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಮೂರು ದಿನಗಳ ಇಂಗ್ಲೆಂಡ್  ಪ್ರವಾಸದ ಎರಡನೆಯ ದಿನ ಪ್ರತಿಷ್ಠಿತ ವೆಂಬ್ಲಿ ಕ್ರೀಡಾಂಗಣದಲ್ಲಿ ಸೇರಿದ್ದ 60,000 ಆನಿವಾಸಿ ಭಾರತೀಯರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ, ಡಿಸೆಂಬರ್ 15 ರಿಂದ ಲಂಡನ್ ಮತ್ತು ಅಹಮದಾಬಾದ್ ನಡುವೆ ನೇರ ವಿಮಾನಯಾನ ಸೇವೆ ಸಿಗಲಿದೆ ಎಂದು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್ ಸಹ,  ” ಲಂಡನ್ ಮತ್ತು ಅಹಮದಾಬಾದ್ ನಡುವೆ ಏರ್ ಇಂಡಿಯಾ ವಿಮಾನ ಸೇವೆ ಆರಂಭವಾಗುವುದಾಗಿ ಮೋದಿ ಅವರು ಘೋಷಿಸಿದ್ದಾರೆ “, ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಭಾರತ (OCI) ಸ್ಥಾನಮಾನದ ಸಾಗರೋತ್ತರ ನಾಗರಿಕ ಅನ್ವಯಿಸುವ ಮತ್ತು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಹೇಳಿದರು.

ಭಾರತದ ಸಾಗರೋತ್ತರ ನಾಗರಿಕ ಸ್ಥಾನಮಾನವನ್ನು ಪಡೆಯುವ ಪ್ರಕ್ರಿಯೆಗೆ ಅರ್ಜಿ ಸಲ್ಲಿಸುವ ಮತ್ತು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗುವುದು ಎಂದು ಪ್ರಧಾನಿ ಆನಿವಾಸಿ ಭಾರತೀಯರಿಗೆ ಭರವಸೆ ನೀಡಿದ್ದಾರೆ.

Write A Comment