ರಾಷ್ಟ್ರೀಯ

ಕಂದಾಯ ಸಚಿವರ ರೈಫಲ್ ಕದ್ದು ಶೋಲೆ ಶೈಲಿಯಲ್ಲಿ ಬೆದರಿಕೆ ಹಾಕಿದ!

Pinterest LinkedIn Tumblr

3 sholeಭೋಪಾಲ್: ಕಂದಾಯ ಸಚಿವರ ಕಾರ್ ಕದ್ದ ವ್ಯಕ್ತಿಯೊಬ್ಬ ಕಟ್ಟಡದ ಮೇಲೇರಿ ಸಚಿವರನ್ನು ಭೇಟಿಯಾಗಲು ಅವಕಾಶ ಮಾಡಿಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ವಿಲಕ್ಷಣ ಘಟನೆ  ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿ ನಡೆದಿದೆ.

ವರದಿಗಳ ಪ್ರಕಾರ, ವೃತ್ತಿಯಲ್ಲಿ ಚಾಲಕನಾಗಿರುವ ಅಜಿಜ್ ಖಾನ್,ರೈಸನ್ ಜಿಲ್ಲೆಯ ಬೇಗಾಮಗಂಜ್ ನಿವಾಸಿಯಾಗಿದ್ದು, ನಿನ್ನೆ ಸಂಜೆ ಕಂದಾಯ ಸಚಿವರಾದ ರಾಮ್‌ಪಾಲ್ ಸಿಂಗ್ ಅವರನ್ನು ಭೇಟಿಯಾಗಲು  ಅವರ ನಿವಾಸಕ್ಕೆ ಬಂದಿದ್ದ. ಹಲವು ಗಂಟೆಗಳು ಕಾದರೂ ಸಿಂಗ್ ಅವರನ್ನು  ಭೇಟಿಯಾಗಲು ಸಾಧ್ಯವಾಗಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ಆತ ಸಚಿವರ ಬಂಗಲೆಯ ಮುಂದೆ ನಿಲ್ಲಿಸಲಾಗಿದ್ದ ಅವರ ಕಾರ್ ಕಿಟಕಿ ಗಾಡು ಒಡೆದು ಒಳಗಿದ್ದ ರೈಫಲ್‌ನ್ನು ಎತ್ತಿಕೊಂಡಿದ್ದಾನೆ.

ವಿಷಯ ತಿಳಿದ ಅಪರಾಧ ದಳದ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಆತನನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಎತ್ತರವಾದ ಕಟ್ಟಡವೊಂದನ್ನು ಏರಿದ ಆತ ಮಂತ್ರಿಗಳನ್ನು ಭೇಟಿ ಮಾಡಿಸದಿದ್ದರೆ  ಮೇಲಿನಿಂದ ಹಾರಿ ಅಥವಾ ಅಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

ಕೊನೆಗೂ ಆತನನ್ನು ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತ ಕುಡಿತದ ಅಮಲಿನಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment