ರಾಷ್ಟ್ರೀಯ

10 ಲಕ್ಷ ಆದಾಯ ಇರುವ ಬಳಕೆದಾರರಿಗೆ ಇನ್ನು ಗ್ಯಾಸ್‌ ಸಬ್ಸಿಡಿ ಇಲ್ಲ !

Pinterest LinkedIn Tumblr

5 Venkayya-Naidu-bgಹೈದರಾಬಾದ್‌: ವರ್ಷಕ್ಕೆ 10 ಲಕ್ಷ ರೂಪಾಯಿ ಮೀರಿ ಆದಾಯ ಹೊಂದಿರುವ ಬಳಕೆದಾರರಿಗೆ ಎಲ್‌ಪಿಜಿ ಸಿಲಿಂಡರ್‌ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಲು ಕೇಂದ್ರ ಸರಕಾರವೀಗ ಆಲೋಚಿಸುತ್ತಿದೆ ಎಂದು ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

“ದೇಶದಲ್ಲಿ ಅಸಂಖ್ಯಾತ ಅಕ್ರಮ ಅಡುಗೆ ಅನಿಲ ಸಂಪರ್ಕಗಳನ್ನು ಪತ್ತೆ ಹಚ್ಚಿರುವುದಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಈ ಅಕ್ರಮ ಬಳಕೆದಾರರಿಗೆ ಸಹಾಯಧನವಿರುವ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯನ್ನು ನಿಲ್ಲಿಸಿದರೆ ಹಲವು ಸಾವಿರ ಕೋಟಿ ರೂ.ಗಳನ್ನು ಉಳಿಸಲು ಸಾಧ್ಯವಿದೆ’ ಎಂದು ಸಚಿವ ನಾಯ್ಡು ಹೇಳಿದರು.

ವರ್ಷಕ್ಕೆ 10 ಲಕ್ಷ ರೂ. ಮೀರಿ ಆದಾಯ ಹೊಂದಿರುವ ಬಳಕೆದಾರರಿಗೆ ಗ್ಯಾಸ್‌ ಸಬ್ಸಿಡಿ ನಿಲ್ಲಿಸಲು ಸರಕಾರ ಉದ್ದೇಶಿಸಿದೆ. 10 ಲಕ್ಷಕ್ಕಿಂತ ಹೆಚ್ಚಿಗೆ ಆದಾಯ ಇರುವವರಿಗೆ ಯಾಕೆ ಸಬ್ಸಿಡಿ ಬೇಕು; ಮಾತ್ರವಲ್ಲ ಸಚಿವರಿಗೆ ಕೂಡ ಯಾಕೆ ಗ್ಯಾಸ್‌ ಸಬ್ಸಿಡಿ ಬೇಕು ? ಈ ತನಕ 30 ಲಕ್ಷ ಬಳಕೆದಾರರು ಗ್ಯಾಸ್‌ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಆ ಸಬ್ಸಿಡಿಯನ್ನು ಬಡವರಿಗಾಗಿ ಬಳಸಲಾಗುವುದು ಎಂದು ವೆಂಕಯ್ಯ ನಾಯ್ಡು ಅವರು ಆಂಧ್ರಪ್ರದೇವ ಮತ್ತು ತೆಲಂಗಾಣ ಚೇಂಬರ್‌ ಆಫ್ ಕಾಮರ್ಸ್‌ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
-ಉದಯವಾಣಿ

Write A Comment