Uncategorized

ಬೆಂಗಳೂರು:ಈ ವರ್ಷ ಶಬ್ದ ಮಾಲಿನ್ಯ ಶೇ 5.3ರಷ್ಟು ಇಳಿಕೆ

Pinterest LinkedIn Tumblr

6 fire-crackersಬೆಂಗಳೂರು: ಸತತ ಮಳೆ ಮತ್ತು ಮೋಡಕವಿದ ವಾತಾವರಣವು ನಗರದಲ್ಲಿ ಈ ಸಲದ ದೀಪಾವಳಿಯನ್ನು ಅಕ್ಷರಶಃ ಮಂಕಾಗಿಸಿತು. ಇದನ್ನು ಸ್ವತಃ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ. ಕಳೆದ ದೀಪಾವಳಿಗೆ ಹೋಲಿಸಿದರೆ, ಈ ಬಾರಿ ನಗರದಲ್ಲಿ ಶಬ್ದಮಾಲಿನ್ಯದ ಪ್ರಮಾಣ ಶೇ. 5.3ರಷ್ಟು ಇಳಿಕೆಯಾಗಿದೆ. ಇದಕ್ಕೆ ನಿರಂತರ ಮಳೆಯೇ ಕಾರಣ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಹಬ್ಬದ ಹಿನ್ನೆಲೆಯಲ್ಲಿ ನ. 10, 11 ಮತ್ತು 12ರಂದು ಆಯ್ದ ಹತ್ತು ಕಡೆಗಳಲ್ಲಿ ಮಂಡಳಿಯ ವಿಜ್ಞಾನಿಗಳು ಶಬ್ದಮಾಲಿನ್ಯದ ಪ್ರಮಾಣವನ್ನು ಪರಿಶೀಲಿಸಿದರು. ಏಳು ಕಡೆಗಳಲ್ಲಿ ಕಳೆದ ಬಾರಿಗಿಂತ ಕನಿಷ್ಠ ಶೇ.0.6ರಿಂದ ಗರಿಷ್ಠ 11ರಷ್ಟು ಶಬ್ದಮಾಲಿನ್ಯ ಕಡಿಮೆ ಆಗಿರುವುದು ಕಂಡುಬಂದಿದೆ. ಅದೇ ರೀತಿ, ಈ ಹತ್ತು ಪ್ರದೇಶಗಳ ಪೈಕಿ ನಾಲ್ಕು ಕಡೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹಗಲು ಹೊತ್ತಿನಲ್ಲಿ ಶೇ. 0.5ರಿಂದ ಶೇ. 2.3ರಷ್ಟು ಶಬ್ದಮಾಲಿನ್ಯ ಕಡಿಮೆ ಇದೆ.

ರಾತ್ರಿ ವೇಳೆ ಆರು ಪ್ರದೇಶಗಳಲ್ಲಿ ಶೇ.0.2ರಿಂದ ಶೇ. 20.6ರಷ್ಟು ಶಬ್ದಮಾಲಿನ್ಯ
ಹೆಚ್ಚಳವಾಗಿದೆ.
-ಉದಯವಾಣಿ

Write A Comment