ಅಂತರಾಷ್ಟ್ರೀಯ

ಪಾಕ್ ನ ಶಾಂತಿ ಪ್ರಸ್ತಾವನೆಗೆ ಬಿಜೆಪಿ ಪ್ರತಿಕ್ರಿಯಿಸುತ್ತಿಲ್ಲ: ಸಲ್ಮಾನ್ ಖುರ್ಷಿದ್

Pinterest LinkedIn Tumblr

salman-kurshidಇಸ್ಲಾಮಾಬಾದ್‌: ಬಿಜೆಪಿ ವಿರುದ್ಧ ಭಾರತದ ಮಾಜಿ ವಿದೇಶಾಂಗ ಸಚಿವ ಮತ್ತು  ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಕಿಡಿ ಕಾರಿದ್ದಾರೆ.

ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತೀಯ ಜನತಾ ಪಕ್ಷದ ವಿರುದ್ಧ ಟೀಕೆ ಮಾಡಿರುವ ಖುರ್ಷಿದ್‌, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೂ ಪಾಕಿಸ್ತಾನದ ಜತೆಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರಬಾರದೆಂದು ಬಿಜೆಪಿ ಒತ್ತಡ ಹೇರುತ್ತಿತ್ತು ಎಂದು ಖುರ್ಷಿದ್‌ ಹೇಳಿದ್ದಾರೆ ಎಂದು ಪಾಕಿಸ್ತಾನದ ಪತ್ರಿಕೆ ವರದಿ ಮಾಡಿದೆ.

ಇಸ್ಲಾಮಾಬಾದ್‌ನ ಜಿನ್ನಾ ಇನ್‌ಸ್ಟಿಟ್ಯೂಟ್‌ನಲ್ಲಿ ಮಾತನಾಡಿರುವ  ಸಲ್ಮಾನ್‌ ಖುರ್ಷಿದ್‌, ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲಸಬೇಕೆಂಬ ಪಾಕಿಸ್ತಾನದ ಆಹ್ವಾನಕ್ಕೆ ಭಾರತ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ದೂರಿದ್ದಾರೆ. ಇಸ್ಲಾಮಾಬಾದ್‌ನ ಶಾಂತಿ ಪ್ರಸ್ತಾವನೆಗೆ ಸೂಕ್ತವಾಗಿ ಸ್ಪಂದಿಸಲು ಭಾರತದ ಬಿಜೆಪಿ ನೇತೃತ್ವದ ಸರಕಾರ ವಿಫಲವಾಯಿತು ಎಂದು ಆರೋಪಿಸಿದ್ದಾರೆ.

Write A Comment