ಅಂತರಾಷ್ಟ್ರೀಯ

ಭಾರತದಲ್ಲಿ ಒಂದು ಸಾವಿರ ಬ್ರಿಟಿಷ್ ಪದವೀಧರರಿಗೆ ಟಿಸಿಎಸ್ ತರಬೇತಿ

Pinterest LinkedIn Tumblr

tcs-newಲಂಡನ್: ಭಾರತದ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಸುಮಾರು 1 ಸಾವಿರ ಬ್ರಿಟಿಷ್ ಪದವೀಧರರಿಗೆ ಭಾರತದಲ್ಲಿ ತರಬೆತಿ ನೀಡಲು ಮುಂದಾಗಿದೆ.

ಬ್ರಿಟನ್ ನ ಬ್ರಿಟಿಷ್ ಕೌನ್ಸಿಲ್ ಜನರೇಷನ್ ಮತ್ತು ಇಂಡಿಯಾ ಪ್ರೊಗ್ರಾಮ್ ಸಹಭಾಗಿತ್ವದಲ್ಲಿ  ನೂತನ ಪ್ರಯೋಗಾಲಯ ಮತ್ತು  ತಂತ್ರಾಂಶ ಅಭಿವೃದ್ಧಿ ಕೇಂದ್ರಗಳಲ್ಲಿ ಇವರಿಗೆ ತರಬೇತಿ ನೀಡಿ ಡಿಜಿಟಲ್ ಕೌಶಲ್ಯದ ನಡುವಿನ ಅಂತರ ಬೆಸೆಯಲು ಈ ತರಬೇತಿ ನೀಡಲಾಗುತ್ತದೆ.

ಮೂರು ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭೇಟಿಯ ವೇಳೆ ಟಿಸಿಎಸ್ ಅಧಿಕೃತವಾಗಿ ಘೋಷಿಸಿದೆ. ಭಾರತದ ಪ್ರಯೋಗಾಲಯಗಳಲ್ಲಿ ತರಬೇತಿ ಮೂಲಕ ಕೆಲಸ ಮಾಡಲು ಬ್ರಿಟನ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.

ಮುಂಬರುವ ದಿನಗಳಲ್ಲಿ ಐಟಿ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಈ ತರಬೇತಿ ನೀಡಲಾಗುತ್ತದೆ. 2020 ರ ವೇಳೆಗೆ, ವಿಜ್ಞಾನ, ತಂತ್ರಜ್ಞಾನ, ಎಂಜಿನೀಯರಿಂಗ್ ಹಾಗೂ ಗಣಿತ ಶಾಸ್ತ್ರ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಪದವೀದರರ ಕೊರತೆ ಎದುರಾಗಲಿದೆ ಎಂದು ಸೋಷಿಯಲ್ ಮಾರ್ಕೆಟ್ ಫೌಂಡೇಶನ್ ಅಭಿಪ್ರಾಯ ಪಟ್ಟಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Write A Comment