ಅಂತರಾಷ್ಟ್ರೀಯ

ನ್ಯೂಯಾರ್ಕ್ ವಿಶ್ವ ಆರೋಗ್ಯ ಸಮಾವೇಶದಲ್ಲಿ ಯು.ಟಿ.ಖಾದರ್

Pinterest LinkedIn Tumblr

u.tನ್ಯೂಯಾರ್ಕ್, ನ.12: ಕರ್ನಾಟಕದಲ್ಲಿ ಗುಟ್ಕಾ ಮತ್ತು ಧೂಮಪಾನ ನಿಷೇಧದ ಕ್ರಮ ಕೈಗೊಂಡಾಗ ಹಲವಾರು ಸವಾಲುಗಳು ಎದುರಾಗಿದ್ದವು. ಹೀಗೆ ನಿಷೇಧ ಮಾಡುವಾಗ ಅದರಿಂದ ತುಂಬಾ ಕುಟುಂಬಗಳು ನಿರುದ್ಯೋಗರಾಗುತ್ತಾರೆ. ಅವರಿಗೂ ಪರ್ಯಾಯ ಮಾರ್ಗ ಆಗಬೇಕಾದ ಅನಿವಾರ್ಯತೆ ಇದೆ. ಎಲ್ಲವನ್ನೂ ಹಲವು ದೃಷ್ಟಿಕೋನದಲ್ಲಿ ನೋಡಬೇಕಾಗುತ್ತದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ನ್ಯೂಯಾರ್ಕ್‌ನ ಮ್ಯಾನ್ ಹಟನ್‌ನಲ್ಲಿ ನ.9ರಿಂದ 11ರವರೆಗೆ ನಡೆದ ವಿಶ್ವ ಆರೋಗ್ಯ ಸಮಾವೇಶದಲ್ಲಿ ರಾಜ್ಯ ಸರಕಾರದ ಪ್ರತಿನಿಧಿಯಾಗಿ ಭಾಗವಹಿಸಿ ಮಾತನಾಡಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, 10 ನಿಮಿಷಗಳ ಕಾಲ ಮಾತನಾಡಿದರು.

ರಾಜ್ಯದಲ್ಲಿ ಕ್ಯಾನ್ಸರ್ ರೋಗದ ನಿಯಂತ್ರಣದ ಬಗ್ಗೆ ಮಹತ್ವದ ಯೋಜನೆ ಕೈಗೊಳ್ಳುವ ನಿಟ್ಟಿನಲ್ಲಿ 2017ರಲ್ಲಿ ಬೆಂಗಳೂರಿನಲ್ಲಿ ವಿಶ್ವದ ಖ್ಯಾತ ಕ್ಯಾನ್ಸರ್ ಆಸ್ಪತ್ರೆ ಹಾಗೂ ವೈದ್ಯಕೀಯ ತಜ್ಞರ ಸಹಭಾಗಿತ್ವದಲ್ಲಿ ಯು.ಎಸ್. ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಯು.ಟಿ.ಖಾದರ್ ಅವರು ನ್ಯೂಯಾರ್ಕ್‌ನಲ್ಲಿರುವ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದರು.

ಸಮಾವೇಶದಲ್ಲಿ 15ಕ್ಕಿಂತಲೂ ಹೆಚ್ಚಿನ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಮಾವೇಶವು ನ್ಯೂಯಾರ್ಕ್‌ನ ಮಾಜಿ ಮೇಯರ್ ಬ್ಲೂಮ್ ಬರ್ಗ್‌ರ ನೇತೃತ್ವದಲ್ಲಿ, ಯುನೈಟೆಡ್ ನೇಶನ್ ಸದಸ್ಯರು, ವಿಶ್ವ ಆರೋಗ್ಯ ಸಂಸ್ಥೆ, ಯೂನಿಯನ್, ನ್ಯೂಯಾರ್ಕ್ ಹೆಲ್ತ್ ಡಿಪಾರ್ಟ್ ಮೆಂಟ್ ಸಹಯೋಗದಲ್ಲಿ 3 ದಿನಗಳು ಜರಗಿತು.ನ್ಯೂಯಾರ್ಕ್ ವಿಶ್ವ ಆರೋಗ್ಯ ಸಮಾವೇಶದಲ್ಲಿ ಯು.ಟಿ.ಖಾದರ್ ಅವರ ಜೊತೆಗೆ ಬೆಂಗಳೂರಿನ ಖ್ಯಾತ ಕ್ಯಾನ್ಸರ್ ವೈದ್ಯ ಡಾ. ವಿಶಾಲ್ ಹಾಗೂ ಸೌದಿ ಅರೇಬಿಯಾದ ಉದ್ಯಮಿ ಆಸಿಫ್ ಅಮಾಕೋ ಉಪಸ್ಥಿತರಿದ್ದರು.

ಧೂಮಪಾನ ಹಾಗೂ ಗುಟ್ಕಾದಿಂದ ಉಂಟಾಗುವ ಅಡ್ಡ ಪರಿಣಾಮ, ಅದಕ್ಕೆ ಪರಿಹಾರ ಮತ್ತು ಕಾರ್ಯಗತಗೊಳಿಸುವ ಬಗ್ಗೆ ಯು.ಟಿ.ಖಾದರ್ ಚರ್ಚೆ ನಡೆಸಿದರು. ಈ ಯೋಜನೆ ಗಳನ್ನು ಇತರ ರಾಷ್ಟ್ರಗಳು ಶ್ಲಾಘಿಸಿ ಕರ್ನಾಟಕ ರಾಜ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದವು. ಕರ್ನಾಟಕದ ಬೈಕ್ ಆ್ಯಂಬುಲೆನ್ಸ್ ಯೋಜನೆ ಯನ್ನು ವಿಶ್ವ ರಸ್ತೆ ಸುರಕ್ಷತಾ ತಜ್ಞರು ಶ್ಲಾಘಿಸಿದರಲ್ಲದೆ ಈ ಯೋಜನೆಯು ಇತರ ಮುಂದುವರಿದ ದೇಶಗಳಲ್ಲೂ ಕಾರ್ಯಗತವಾಗಬೇಕೆಂದು ಅಭಿಪ್ರಾಯಪಟ್ಟರು. ಈ ಸಂದರ್ಭ ಅವರು, ಅರ್ಧ ಗಂಟೆಯ ಪ್ಯಾನಲ್ ಡಿಸ್ಕಶನ್ ಹಾಗೂ ರೌಂಡ್ ಟೇಬಲ್ ಚರ್ಚೆಯಲ್ಲೂ ಭಾಗವಹಿಸಿ ಅನುಭವಗಳನ್ನು ಹಂಚಿಕೊಂಡರು.

Write A Comment