ಅಂತರಾಷ್ಟ್ರೀಯ

ಬಾಲಿಯಲ್ಲಿ ನಟಿ ಹೇಜೆಲ್ ಜೊತೆ ಯುವಿ ನಿಶ್ಚಿತಾರ್ಥ!

Pinterest LinkedIn Tumblr

Yuvraj-Singh-Hazel-Keechಇಂಡೋನೇಷ್ಯಾ: ಕ್ರಿಕೆಟಿಗ ಯುವರಾಜ್ ಸಿಂಗ್  ತನ್ನ ಗೆಳತಿ, ನಟಿ ಹೇಜೆಲ್ ಕೀಚ್ ಜೊತೆ ಇಂಡೋನೇಷ್ಯಾದ ಬಾಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಹರ್ಭಜನ್‌ ಸಿಂಗ್‌ ಬಳಿಕ ಈಗ ವಿವಾಹವಾಗುವ ಸರದಿ ಯುವರಾಜ್‌ ಸಿಂಗ್‌ ಅವರದು. ಯುವರಾಜ್‌ ಅವರು ಬ್ರಿಟಿಷ್‌ ಸಂಜಾತೆ ರೂಪದರ್ಶಿ, ಬಾಲಿವುಡ್‌ ನಟಿ ಹೇಜೆಲ್‌ ಕೀಚ್‌ ಅವರನ್ನು ಮುಂಬರುವ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆಂದು ವರದಿಗಳು ಹೇಳಿದ್ದವು.

ಇದೀಗ ಅಭಿಮಾನಿಗಳಿಗೆ ಶಾಕ್ ಸುದ್ದಿ ಎಂಬಂತೆ ಯುವಿ ಮತ್ತು ಹೇಜೆಲ್ ಬಾಲಿಯಲ್ಲಿ ಬುಧವಾರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಯುವಿ ವಿವಾಹ ಕುರಿತಂತೆ ಹರಿದಾಡುತ್ತಿದ್ದ ಊಹಾಪೋಹಕ್ಕೆ ತೆರೆ ಎಳೆ ಬಿದ್ದಂತಾಗಿದೆ ಎಂದು ವರದಿ ವಿವರಿಸಿದೆ.

ಯುವರಾಜ್‌-ಹೇಜೆಲ್‌ ಜೋಡಿ ಕಳೆದ ಕೆಲ ತಿಂಗಳುಗಳಿಂದ ಪ್ರಣಯದಲ್ಲಿ ತೊಡಗಿದ್ದರು. 2011ರ ವಿಶ್ವಕಪ್‌ನ ಸೂಪರ್‌ಸ್ಟಾರ್‌ ಯುವರಾಜ್‌ ಅವರು ಹೇಜೆಲ್‌ರನ್ನು ಸಾಂಪ್ರದಾಯಿಕ ಶೈಲಿಯಲ್ಲೇ ವರಿಸಲಿದ್ದಾರೆ. ಚಂಡೀಗಢ ಸಮೀಪ ಫ‌ತೇಗಢ್‌ ಸಾಹಿಬ್‌ ಜಿಲ್ಲೆಯ ಹನ್ಸಾಲಿವಾಲೆ ಗುರುದ್ವಾರದಲ್ಲಿ ವಿವಾಹ ನಡೆಯಲಿದೆ. ಮರುದಿನ  ದಿಲ್ಲಿಯಲ್ಲಿ ಸತ್ಕಾರಕೂಟವೊಂದನ್ನು ಏರ್ಪಡಿಸಲಿದ್ದಾರೆಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿತ್ತು.

ಹೇಜೆಲ್‌ ಅವರ ತಂದೆ ಬ್ರಿಟಿಷ್‌ ಪ್ರಜೆಯಾಗಿದ್ದರೆ ತಾಯಿ ಮಾರಿಷಸ್‌ ಮಹಿಳೆ. ಯುವರಾಜ್‌ ಮತ್ತು ಹೇಜೆಲ್‌ ಅವರ ವಿವಾಹ ಮೊದಲು ಡಿ.13ಕ್ಕೆ ನಿಗದಿಯಾಗಿತ್ತು. ಆದರೆ ಕುಟುಂಬ ಸದಸ್ಯರೊಬ್ಬರ ನಿಧನದಿಂದಾಗಿ ವಿವಾಹ ಮುಂದೂಡಲ್ಪಟ್ಟಿತ್ತು.
-ಉದಯವಾಣಿ

Write A Comment