ನವದೆಹಲಿ: ಮ್ಯಾಗಿ ಭಾರತದ ಜನಪ್ರಿಯ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ 5 ನಿಮಿಷಗಳಲ್ಲೆ (ಮ್ಯಾಗಿ ವೆಲ್ ಕಂ ಕಿಟ್ಸ್) 60 ಸಾವಿರ ಮ್ಯಾಗಿ ಅಂತರ್ಜಾಲ ಮಾರಾಟ ತಾಣವಾದ ಸ್ನ್ಯಾಪ್ ಡೀಲ್ ನಲ್ಲಿ ಮಾರಾಟವಾಗಿದೆ.
ಮ್ಯಾಗಿ ಮೇಲಿನ ನಿಷೇಧ ರದ್ದಾದ ನಂತರ ವಾರದ ಆರಂಭದಲ್ಲೇ ಸ್ನ್ಯಾಪ್ ಡೀಲ್ ನೆಸ್ಲೆಯ ಮ್ಯಾಗಿಯನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿತ್ತು. ಮ್ಯಾಗಿಯಲ್ಲಿ ಸೀಸದ ಅಂಶ ಹೆಚ್ಚಿನ ಪ್ರಮಾಣದಲ್ಲಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ 5 ತಿಂಗಳ ಕಾಲ ಮ್ಯಾಗಿ ಮಾರಾಟ ನಿಷೇಧವಾಗಿತ್ತು. (ಇದೀಗ ಬಾಂಬೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನಂತರ ಮತ್ತೆ ಮಾರುಕಟ್ಟೆ ಪ್ರವೇಶಿಸಿದೆ.)
ಮ್ಯಾಗಿ ವೆಲ್ ಕಮ್ ಕಿಟ್ ಅನ್ನು ರಿಜಿಸ್ಟ್ರೇಶನ್ ಮಾಡಿಕೊಳ್ಳುವ ಮೂಲಕ ಸ್ನ್ಯಾಪ್ ಡೀಲ್ ನಲ್ಲಿ ಖರೀದಿಸಬೇಕಾಗಿತ್ತು. ಅಚ್ಚರಿ ಎಂಬಂತೆ 5 ನಿಮಿಷದಲ್ಲೇ 60 ಸಾವಿರ ಮ್ಯಾಗಿ ವೆಲ್ ಕಂ ಕಿಟ್ ಮಾರಾಟವಾಗಿದೆ. ಮ್ಯಾಗಿ ವೆಲ್ ಕಂ ಕಿಟ್ ನಲ್ಲಿ 12 ಪ್ಯಾಕೆಟ್ ಮ್ಯಾಗಿ, 2016ರ ಮ್ಯಾಗಿ ಕ್ಯಾಲೆಂಡರ್, ಮ್ಯಾಗಿ ಫೋಸ್ಟ್ ಕಾರ್ಡ್ಸ್, ಮ್ಯಾಗಿ ಫ್ರಿಡ್ಜ್ ಮ್ಯಾಗ್ನೆಟ್ ಹಾಗೂ ವೆಲ್ ಕಂ ಬ್ಯಾಕ್ ಲೆಟರ್ ಸೇರಿದೆ.
ಮ್ಯಾಗಿ ವೆಲ್ ಕಂ ಕಿಟ್ ಅನ್ನು ಸೇಲ್ ಮಾಡುವುದಾಗಿ ಸ್ನ್ಯಾಪ್ ಡೀಪ್ ನವೆಂಬರ್ 9ರಂದೇ ಘೋಷಿಸಿತ್ತು. ಇಂದು ಸ್ನ್ಯಾಪ್ ಡೀಲ್ ತನ್ನ ಮ್ಯಾಗಿ ಮಾರಾಟ ಆರಂಭಿಸಿತ್ತು.
-ಉದಯವಾಣಿ