ಬಂಟ್ವಾಳ: ಮಡಿಕೇರಿ ಗಲಭೆಗೆ ಸಂಬಂಧಿಸಿದಂತೆ ಎಸ್‍ಡಿಪಿಐ ಸಂಘಟನೆ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನಾ ಸಭೆಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದ ಘಟನೆ ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿ ಸಂಭವಿಸಿದೆ.
ಮಡಿಕೇರಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಗಲಭೆ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಎಸ್‍ಡಿಪಿಐ ಸಂಘಟನೆ ಪ್ರತಿಭಟನಾ ಸಭೆ ಆಯೋಜಿಸಿತ್ತು. ಈ ವೇಳೆ ಸಭೆಯಲ್ಲಿದ್ದವರಿಗೆ ಕಿಡಿಗೇಡಿಗಳು ಹೊರಗಿನಿಂದ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು ಪ್ರಕ್ಷಬ್ದ ವಾತಾವರಣ ನಿರ್ಮಾಣಗೊಂಡಿತ್ತು.
ಇದೇ ವೇಳೆ ಪೊಲೀಸರು ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತೆರಳುವುದನ್ನು ತಡೆಯಲು ಸಭೆಯನ್ನು ನಿಲ್ಲಿಸುವಂತೆ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪ್ರತಿಭಟನಾಕಾರರೂ ಕಲ್ಲು ತೂರಾಟಕ್ಕೆ ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದರು. ಇನ್ನೂ ಘಟನೆಯಿಂದ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದ್ದು, ಉದ್ವಿಗ್ನತೆ ಮುಂದುವರೆದಿದೆ. ಘಟನೆಯ ಹಿನ್ನೆಲೆಯಲ್ಲಿ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಸಭೆಯಲ್ಲಿದ್ದವರಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತೆರಳುವುದನ್ನು ತಡೆಯಲು ಸಭೆಯನ್ನು ನಿಲ್ಲಿಸುವಂತೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಮುಂದಾದಾಗ ಮಾತಿನ ಚಕಮಕಿಯೂ ನಡೆಯಿತು. ಕಲ್ಲು ತೂರಾಟದ ವೇಳೆ ಬಂಟ್ವಾಳ ವೃತ್ತನಿರೀಕ್ಷಕ ಬೆಳ್ಳಿಯಪ್ಪ ಅವರ ತಲೆಗೆ ಗಾಯಗಳಾಗಿದ್ದು, ಶ್ರೀಸಾಯಿ ಅಟೋ ಕನ್ಸಲ್ಟೆಂಟ್ ಹಾಗೂ ಶ್ರೀವಿಜಯಲಕ್ಷೀ ಸ್ಟೀಲ್ ಹಾಗೂ ಸಿಮೆಂಟ್ ಅಂಗಡಿಗೆ ಕಲ್ಲು ತೂರಾಟ ನಡೆದು ಗಾಜಿಗೆ ಹಾನಿಯಾಗಿದೆ.
ಅಲ್ಲದೆ ಈ ವೇಳೆ ಪ್ರತಿಭಟನಾಕಾರರೂ ಕಲ್ಲು ತೂರಾಟಕ್ಕೆ ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು, ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದರು.
ಸ್ಥಳಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ಎಎಸ್ಪಿ ರಾಹುಲ್ ಕುಮಾರ್, ಪುತ್ತೂರು ಸಿಐ ಮಹೇಶ್ ಪ್ರಸಾದ್, ಠಾಣಾಧಿಕಾರಿ ನಂದಕುಮಾರ್, ರಕ್ಷಿತ್ ಗೌಡ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಸತ್ಯ / ಸುಳ್ಳು ವದಂತಿಯಿಂದ ಕಂಗೆಟ್ಟನಾಗರೀಕರು :
ಈ ಎಲ್ಲಾ ಘಟನೆಗಳ ಜೊತೆಗೆ ಸಾಮಾಜಿಕ ಜಲತಾಣಗಳಲ್ಲಿ ಹಲವಾರು ವದಂತಿಗಳು ಹರಡುತ್ತಿದ್ದು, ( ಬಿ.ಸಿ.ರೋಡ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಚಾಕು ಇರಿತ – ನಗರದ ಎ.ಜೆ ಆಸ್ಪತ್ರೆಗೆ ದಾಖಲು – ಈ ರೀತಿಯ ಹಲವಾರು ವದಂತಿಗಳಿಂದ ನಾಗರೀಕರಲ್ಲಿ ಆತಂಕ) ಜಿಲ್ಲೆಯ ನಾಗರೀಕರು ಇದರಿಂದ ಆತಂಕ ಪಡುವಂತಾಗಿದೆ. ಇದು ಎಷ್ಟು ಸತ್ಯ – ಎಷ್ಟು ಸುಳ್ಳು ಎಂದು ಇನ್ನೂ ಸ್ಪಷ್ಟವಾಗಿಲ್ಲ.












