ಅಂತರಾಷ್ಟ್ರೀಯ

ದೀಪಾವಳಿ: ಪ್ರಧಾನಿಗೆ ಒಬಾಮಾ ಶುಭಾಶಯ

Pinterest LinkedIn Tumblr

obama

ನವದೆಹಲಿ: ದೇಶಾದ್ಯಂತ ದೀಪಗಳ ಹಬ್ಬ ದೀಪಾವಳಿವನ್ನು ವೈಭವದಿಂದ ಆಚರಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಹಾಟ್‌ಲೈನ್‌ನಲ್ಲಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ.

‘ಕೆಲ ಸಮಯದ ಮೊದಲು ಅಮೇರಿಕಾದ ಅಧ್ಯಕ್ಷರು ನನಗೆ ಕರೆ ಮಾಡಿದ್ದರು. ನಾವು ಪರಷ್ಪರ ದೀಪಾವಳಿ ಶುಭಾಶಯವನ್ನು ವಿನಿಮಯ ಮಾಡಿಕೊಂಡೆವು. ಹೊಸದಾಗಿ ಆರಂಭಗೊಂಡಿರುವ ಹಾಟ್‌ಲೈನ್‌ನಲ್ಲಿ ನಮ್ಮಿಬ್ಬರ ಪ್ರಥಮ ಸಂಭಾಷಣೆ ಇದು’, ಎಂದು ಪ್ರಧಾನಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

“ಈ ವೇಳೆ ಶ್ವೇತ ಭವನದಲ್ಲಿ ಆಚರಿಸಲಾಗುತ್ತಿರುವ ದೀಪಾವಳಿ ಬಗ್ಗೆ ಉಲ್ಲೇಖಿಸಿದರು. ಮುಂದಿನ ವಾರದ ಆರಂಭದಲ್ಲಿ ಟರ್ಕಿಯಲ್ಲಿ ನಡೆಯಲಿರುವ ಜಿ-20 ಶೃಂಗ ಸಭೆಯಲ್ಲಿ  ಭೇಟಿಯಾಗಲು ನಾವಿಬ್ಬರು ಎದುರು ನೋಡುತ್ತಿದ್ದೇವೆ”, ಎಂದು ಪ್ರಧಾನಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಈ ತಿಂಗಳ 12 ರಂದು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ,15 ಮತ್ತು 16 ರಂದು ಟರ್ಕಿಯಲ್ಲಿ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Write A Comment