ರಾಷ್ಟ್ರೀಯ

ಸೇನಾನಿಗಳೊಂದಿಗೆ ದೀಪಾವಳಿ ಆಚರಿಸಿದ ಮೋದಿ; ಡಾಗ್ರೈ ಯುದ್ಧ ಸ್ಮಾರಕಕ್ಕೆ ಗೌರವ

Pinterest LinkedIn Tumblr

moನವದೆಹಲಿ: ಭಾರತೀಯ ಸೈನಿಕರ ಜೊತೆ ಬುಧವಾರ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ವಿಶ್ವ ಇಷ್ಟು ಗೌರವಯುತವಾಗಿ ನೋಡುತ್ತಿರುವುದಕ್ಕೆ ಸೈನಿಕರ ಧೈರ್ಯ ಮತ್ತು ತ್ಯಾಗವೇ ಕಾರಣ ಎಂದಿದ್ದಾರೆ.

೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಸ್ಮಾರಕವಾಗಿರುವ ಅಮೃತಸರದ ಡಾಗ್ರೈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೋದಿ ಗೌರವ ಸಮರ್ಪಿಸಿದ್ದಾರೆ.

ನೆರೆದಿದ್ದ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು “ನಿಮ್ಮೊಂದಿಗೆ ದೀಪಾವಳಿ ಆಚರಿಸಲು ಬಂದಿದ್ದೇನೆ. ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತಸವಾಗಿದೆ” ಎಂದಿದ್ದಾರೆ.

ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದಾಗಲಿಂದಲೂ ಇದು ಎರಡನೇ ಬಾರಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿಕೊಳ್ಳುತ್ತಿರುವುದು. ಕಳೆದ ವರ್ಷ ಮೋದಿ ಸೈಚಿನ್ ನಲ್ಲಿ ಸೈನಿಕರೊಂದಿಗೆ ದೀಪಾವಳಿ ಸಂಭ್ರಮದಲ್ಲಿದ್ದರು.

Write A Comment