ಕರ್ನಾಟಕ

ಸಂಸದ ಪ್ರತಾಪ್ ಸಿಂಹಗೆ ಕೊಲೆ ಬೆದರಿಕೆ

Pinterest LinkedIn Tumblr

pratap

ಮೈಸೂರು: ಮೈಸೂರು- ಕೊಡಗು ಸಂಸದ, ಮಾಜಿ ಪತ್ರಕರ್ತ ಪ್ರತಾಪ್ ಸಿಂಹ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದ್ದು ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಅವರಿಗೆ ನಿನ್ನೆ ರಾತ್ರಿ ಸಿಂಹ ದೂರು ನೀಡಿದ್ದಾರೆ.

‘ಇಂಡಿಯನ್ ಮುಸ್ಲಿಂ’ ಸಂಘಟನೆಯ ಹೆಸರಿನಲ್ಲಿ  ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಿನ್ನೆ ಮಡಿಕೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಕುಟ್ಟಪ್ಪ ಮೃತದೇಹದ ಪಕ್ಕದಲ್ಲಿ ಪ್ರತಾಪ್ ಸಿಂಹ್ ಅವರ ಫೋಟೋವನ್ನಿಟ್ಟು ನಿಮಗೂ ಇದೇ ರೀತಿ ಸಾವು ಕಾದಿದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಜತೆಗೆ ಅವರನ್ನು ಅವಮಾನಕಾರಿಯಾಗಿ ನಿಂದಿಸಿ ಕೊಲೆ ಬೆದರಿಕೆ ಒಡ್ಡಲಾಗಿದೆ ಎಂದು ತಿಳಿದು ಬಂದಿದೆ.

Write A Comment