ಅಂತರಾಷ್ಟ್ರೀಯ

ಅಕ್ರಮ ಸಂಬಂಧ ಹೊಂದಿದ್ದ ಯುವತಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದರು..!

Pinterest LinkedIn Tumblr

akramaಕಾಬೂಲ್,ನ.4- ಅಕ್ರಮ ಸಂಬಂಧ ಹೊಂದಿದ್ದಳೆಂಬ ಆರೋಪದಲ್ಲಿ ಯುವತಿಯೊಬ್ಬಳನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಸಾಯಿಸಿದ ಘಟನೆ ಮಧ್ಯ ಅಫ್ಘಾನಿಸ್ಥಾನದಲ್ಲಿ ನಡೆದಿದೆ. ಸುಮಾರು 19ರಿಂದ 21 ವರ್ಷ ವಯಸ್ಸಿನ ಯುವತಿಯನ್ನು ನೆಲದಲ್ಲಿ ತೆಗೆದ  ತಗ್ಗಿನಲ್ಲಿ ಕೂರಿಸಿ ತಲೆಗೆ ಪೇಟಕಟ್ಟಿದ 15-20 ಜನರ ಗುಂಪು ಅನುಮಾನವೀಯವಾಗಿ  ಕಲ್ಲು ಹೊಡೆದು ಕೊಂದಿದ್ದಾರೆ. ಸುಮಾರು 30 ಸೆಕೆಂಡ್‌ಗಳ ಈ ಚಿತ್ರಣದ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇದರಲ್ಲಿ ಯುವತಿಯ ರೋಧನವೂ ಕೇಳಿಬರುತ್ತಿದೆ. ಹೀಗೆ ದಾರುಣ ಸಾವನ್ನು ಕಂಡ ಯುವತಿಯ ಹೆಸರು ಕ ರೊಕ್ಶಾನಾ ಎಂದು ಕೇಳಿಬಂದಿದೆ.

ಮಧ್ಯ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಸ್ ಖೋಹ್‌ನ ಹೊರವಲಯದಲ್ಲಿ ತಾಲಿಬಾನ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಈ ಘಟನೆ ಡನೆದಿದೆ. ಈ ಸುದ್ದಿ ರೇಡಿಯೋದಲ್ಲೂ ಪ್ರಸಾರವಾಗಿದೆ. ಸುತ್ತಮುತ್ತ ನಿಂತಿದ್ದ ಜನ ತಮ್ಮ ಮೊಬೈಲ್‌ಗಳಿಂದ ಈ ಘೋರ ದೃಶ್ಯವನ್ನು ಚಿತ್ರೀಕರಿಸಿಕೊಂಡಿರುವುದೂ ವಿಡಿಯೋದಲ್ಲಿದೆ. ರೊಕ್ಶಾನಾಳ  ಇಷ್ಟಕ್ಕೆ ವಿರುದ್ಧವಾಗಿ ಆಕೆಯ ಪೋಷಕರು ಯುವಕನೊಬ್ಬನೊಂದಿಗೆ ವಿವಾಹ ಏರ್ಪಡಿಸಿದ್ದರು ಎಂದು ಪ್ರಾಂತ್ಯದ ಮಹಿಳಾ ಗರ್ವನರ್ ಸೀಮಾ ಜೊಯೆಂಡಾ ಹೇಳಿದ್ದಾರೆ. ಯುವತಿ ತನ್ನ ಗೆಳೆಯನ ಜತೆ ಸಂಪರ್ಕವಿಟ್ಟುಕೊಂಡಿದ್ದಳು. ಆಫ್ಘಾನಿಸ್ತಾನದಲ್ಲಿ ಇಂಥವು ಸಾಮಾನ್ಯ. ಅದರಲ್ಲೂ ತಾಲಿಬನ್ ಪ್ರಾಬಲ್ಯದ ಪ್ರಾಂತ್ಯಗಳಲ್ಲಿ ಹೆಚ್ಚು ಎಂದು ಗವರ್ನರ್ ಹೇಳಿದ್ದಾರೆ. ರೊಕ್ಶಾನಾಳ ಗೆಳೆಯನನ್ನು ಚೆನ್ನಾಗಿ ಥಳಿಸಿ ಕೈಬಿಡಲಾಗಿದೆ. ಕಳೆದ ಮಾರ್ಚ್‌ನಲ್ಲಿ ಮಧ್ಯ ಕಾಬೂಲ್‌ನಲ್ಲೂ ಫಾರ್ಖುಂದಾ ಎಂಬ ಮಹಿಳೆಯನ್ನು ಹೊಡೆದು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು.

Write A Comment