ಮುಂಬೈ

ಕಾಂಗ್ರೆಸ್ ಮಾತು ಕೇಳದಿದ್ದರೂ ಪರವಾಗಿಲ್ಲ, ದೇಶದ ಕೂಗು ಕೇಳಿ: ಪ್ರಧಾನಿಗೆ ಕಾಂಗ್ರೆಸ್

Pinterest LinkedIn Tumblr

congಮುಂಬೈ: ಭಾರತದಲ್ಲಿ ಜಾತ್ಯಾತೀತತೆಗೆ ಬಾಲಿವುಡ್ ನಟ ಶಾರುಖ್ ಖಾನ್ ಒಂದು ಉತ್ತಮ ಉದಾಹರಣೆ ಎಂದಿರುವ ಕಾಂಗ್ರೆಸ್, ಹೆಚ್ಚುತ್ತಿರುವ ಅಸಹಿಷ್ಣುತೆಯಿಂದ ದೇಶ ಹೀನಾಯ ಪರಿಸ್ಥಿತಿಗೆ ತಲುಪುತ್ತಿದೆ ಎಂದು ಬುಧವಾರ ಹೇಳಿದೆ.

ವಿವೇಕಯುತ ಸಲಹೆ ಮತ್ತು ದೇಶದ ಜನತೆಯ ಕೂಗು ಕೇಳಿ ಎಂದು ಕಾಂಗ್ರೆಸ್ ನಾಯಕ ಪಿ.ಸಿ.ಚಾಕೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.

‘ಅವರು ಕಾಂಗ್ರೆಸ್ ಮಾತು ಕೇಳದಿದ್ದರೂ ನಮಗೆ ತೊಂದರೆ ಇಲ್ಲ. ಆದರೆ ರಾಜಕೀಯೇತರ ವ್ಯಕ್ತಿಗಳ ಸಲಹೆಯನ್ನು ಅವರು ಕೇಳಲೇಬೇಕು’ ಎಂದಿದ್ದಾರೆ.

ಶಾರುಕ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಹಾಗೂ ಹಿಂದೂತ್ವ ನಾಯಕಿ ಸಾದ್ವಿ ಪ್ರಾಚಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, ಅವರೇ ಈ ದೇಶದ ಭವಿಷ್ಯ ನಿರ್ಧರಿಸುದಾದರೆ ಅವರಿಗೊಂದು ಧನ್ಯವಾದ ಎಂದು ವ್ಯಂಗ್ಯವಾಡಿದ್ದಾರೆ.

ಶಾರುಖ್ ಖಾನ್ ಅವರು ಜಾತ್ಯಾತೀತಗೆ ಒಂದು ಉತ್ತಮ ಉದಾಹರಣೆ. ಅವರು ಜನರ ಅಭಿಪ್ರಾಯವನ್ನು ಹೇಳಿದ್ದಾರೆ ಎಂದು ಚಾಕೊ ಬಾಲಿವುಡ್ ನಟನನ್ನು ಸಮರ್ಥಿಸಿಕೊಂಡಿದ್ದಾರೆ.

ಶಾರುಖ್ ಖಾನ್ ಅವರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿಜಯವರ್ಗಿಯಾ, ಶಾರುಖ್ ದೇಶದ್ರೋಹಿ, ಅವರ ಆತ್ಮ ಪಾಕಿಸ್ತಾನದಲ್ಲಿದೆ. ದೇಹ ಮಾತ್ರ ಭಾರತದಲ್ಲಿದೆ ಎಂದಿದ್ದರು.

Write A Comment