ಅಂತರಾಷ್ಟ್ರೀಯ

ಹೆತ್ತ ತಾಯಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದ ಭಾರತೀಯನಿಗೆ 3 ವರ್ಷ ಜೈಲು

Pinterest LinkedIn Tumblr

jail

ಸಿಂಗಾಪೂರ್, ಅ.17: ತನ್ನ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಭಾರತೀಯನಿಗೆ ಇಲ್ಲಿನ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. 32 ವರ್ಷದ ಭಾರತೀಯ ರಾಜೇಶ್ ಪಾಟ್ನು ತನ್ನ ಕುಟುಂಬದ ಅಪಾರ್ಟ್‌ಮೆಂಟ್‌ನಲ್ಲಿ ತಾಯಿಯನ್ನು ಥಳಿಸಿದ ಬಗ್ಗೆ ಸಲ್ಲಿಸಿದ್ದ 5 ದೂರುಗಳ ಪೈಕಿ 3ರಲ್ಲಿ ಅಪರಾಧಿ ಎಂದು ಸಾಬೀತಾಗಿದೆ.

ತಾವು ಟಿವಿ ವೀಕ್ಷಿಸುತ್ತಿದ್ದಾಗ ತಾಯಿ ಗಲಾಟೆ ಮಾಡಿದಳು ಎಂದು ಸಿಟ್ಟಿಗೆದ್ದ ರಾಜೇಶ್ ಆಕೆಯ ವಾಕಿಂಗ್ ಫ್ರೇಮ್ ಎತ್ತಿ ಹೊರಗೆಸೆದಿದ್ದ. ಪ್ಲಾಸ್ಟಿಕ್‌ಮಗ್‌ನಿಂದ ಹಣೆಗೆ ಹೊಡೆದಿದ್ದ. ಕಸಬರಿಕೆ ಮುರಿಯುವವರೆಗೂ ಹೊಡೆದಿದ್ದ. ಅಲ್ಲದೆ ಕೊಲ್ಲುವುದಾಗಿ ಹೆದರಿಸಿದ್ದ ಕೂಡ. ಈ ಸಂದರ್ಭ ತನ್ನ ಸಹಾಯಕ್ಕಾಗಿ ಆಕೆ ಮೈದುನನನ್ನು ಕರೆದಾಗ ಮತ್ತೆ ಆಕೆಯ ಮೈಮೇಲೆಲ್ಲಾ ಚಿವುಟಿದ್ದ. ಈ ಎಲ್ಲ ಆರೋಪ ಸಾಭೀತಾಗಿದ್ದು ಈಗ ಮೂರು ವರ್ಷ ಕಂಬಿ ಎಣಿಸುವಂತಾಗಿದೆ.

Write A Comment