ಅಂತರಾಷ್ಟ್ರೀಯ

ಹೆಚ್ಚು ಇಂಟರ್ ನೆಟ್ ಬಳಕೆಯಿಂದ ಅಧಿಕ ರಕ್ತದೊತ್ತಡ!

Pinterest LinkedIn Tumblr

internetವಾಷಿಂಗ್ಟನ್: ಹೆಚ್ಚು ಇಂಟರ್ ನೆಟ್ ಬಳಸುವ ಯುವಕರು ಅಧಿಕ ರಕ್ತದೊತ್ತಡ ಎದುರಿಸುವ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನ ವರದಿ ಎಚ್ಚರಿಸಿದೆ.

ಪ್ರತಿ ವಾರ ಕನಿಷ್ಠ 14 ಗಂಟೆ ಅವಧಿ ಇಂಟರ್ ನೆಟ್ ಬಳಕೆ ಮಾಡುವವರಿಗೆ ರಕ್ತದೊತ್ತಡ ಹೆಚ್ಚಿರುವುದನ್ನು ಡೆಟ್ರಾಯಿಟ್ ನ ಹೆನ್ರಿ ಫೋರ್ಡ್ ಆಸ್ಪತ್ರೆಯ ಸಂಶೋಧಕರು ಕಂಡುಹಿಡಿದಿದ್ದಾರೆ. ಅತಿ ಹೆಚ್ಚು ಇಂಟರ್ ನೆಟ್ ಬಳಕೆ ಮಾಡುವ  134 ಯುವಕರ ಪೈಕಿ 26 ಜನರಿಗೆ ಅಧಿಕ ರಕ್ತದೊತ್ತಡ ಇರುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಇಂಟರ್ ನೆಟ್ ನ ಅಧಿಕ ಬಳಕೆ ಹಾಗೂ ಅಧಿಕ ರಕ್ತದೊತ್ತಡದ ಬಗ್ಗೆ  ನಡೆದಿರುವುದು ಇದೇ ಮೊದಲ ಸಂಶೋಧನೆಯಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಇಂಟರ್ ನೆಟ್ ಬಳಕೆಗೂ ಚಟ, ಆತಂಕ, ಖಿನ್ನತೆ, ಬೊಜ್ಜು ಮತ್ತು ಸಾಮಾಜಿಕ ಪ್ರತ್ಯೇಕತೆ ಉಂಟಾಗುವುದಕ್ಕೂ ಕಾರಣವಾಗಿದೆ ಎಂದು ಇದೇ ಸಂಶೋಧನೆ ತಿಳಿಸಿದೆ.

ಯುವಜನತೆ ವಾರದಲ್ಲಿ 25 ಗಂಟೆ ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾರೆ, ಅತಿ ಹೆಚ್ಚು ಇಂಟರ್  ನೆಟ್ ನಮಗೆ ಹಾನಿ ಉಂಟುಮಾಡಬಾರದು. ಕಂಪ್ಯೂಟರ್ ಗಿಂತಲೂ ದೈಹಿಕ ಚಟುವಟಿಕೆಯತ್ತ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಅಧ್ಯಯನ ವರದಿ ಸಲಹೆ ನೀಡಿದೆ.

Write A Comment