ಅಂತರಾಷ್ಟ್ರೀಯ

ಇನ್‌ಫೋಸಿಸ್ ಚೀನಾ ಸಿಇಒಗೆ ಉನ್ನತ ಶಾಂೈ ಪ್ರಶಸ್ತಿ

Pinterest LinkedIn Tumblr

5chinaಬೀಜಿಂಗ್, ಸೆ. 1: ಚೀನಾದ ಆರ್ಥಿಕ ಚಟುವಟಿಕೆಗಳ ಕೇಂದ್ರ ಶಾಂೈಯಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದ ಅಭಿವೃದ್ಧಿಗೆ ನೀಡಿದ ದೇಣಿಗೆಯನ್ನು ಪರಿಗಣಿಸಿ ಇನ್‌ಫೋಸಿಸ್ ಚೀನಾ ಘಟಕದ ಸಿಇಒ ರಂಗರಾಜನ್ ವೆಲ್ಲಮೋರ್‌ಗೆ ಚೀನಾದ ಪ್ರತಿಷ್ಠಿತ ಮಗ್ನೋಲಿಯ ಗೋಲ್ಡ್ ಪ್ರಶಸ್ತಿಯನ್ನು ನೀಡಲಾಗಿದೆ.

ಅವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ.

ವಿಶೇಷ ಕಾರ್ಯಕ್ರಮವೊಂದರಲ್ಲಿ ಶಾಂೈ ಮೇಯರ್ ಯಾಂಗ್ ಕ್ಸಿಯೋಂಗ್ ರಂಗರಾಜನ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಮುಂತಾದ ದೇಶಗಳ ವ್ಯಕ್ತಿಗಳಿಗೂ ಈ ಪ್ರಶಸ್ತಿ ನೀಡಲಾಯಿತು.

ಚೆನ್ನೈಯ 48 ವರ್ಷದ ರಂಗರಾಜನ್ ಪೂರ್ವ ಚೀನಾದ ಶಾಂೈ ಮಹಾನಗರದಲ್ಲಿ ಎಂಟು ವರ್ಷಗಳಿಂದ ವಾಸಿಸುತ್ತಿದ್ದಾರೆ. ಈ ಮೊದಲು, 2011ರಲ್ಲಿ ಅವರಿಗೆ ಮಗ್ನೋಲಿಯ ಸಿಲ್ವರ್ ಪ್ರಶಸ್ತಿ ನೀಡಲಾಗಿತ್ತು.

Write A Comment