ಬರ್ಲಿನ್, ಅ. 1: ವಿವಿಧ ಕಂಪೆನಿಗಳ ತಯಾರಿಕೆಯ ಡೀಸೆಲ್ ವಾಹನಗಳು ಐರೋಪ್ಯ ಮಿತಿಗಿಂತ ಹಲವು ಪಟ್ಟು ಹೆಚ್ಚು ಪ್ರಮಾಣದಲ್ಲಿ ಮಾಲಿನ್ಯವನ್ನು ಹೊರಸೂಸುತ್ತಿವೆ ಎಂದು ಜಗತ್ತಿನ ಬೃಹತ್ ಸ್ವತಂತ್ರ ಮೋಟರಿಂಗ್ ಸಂಸ್ಥೆಗಳ ಪೈಕಿ ಒಂದಾದ ಜರ್ಮನಿಯ ಅಡಾಕ್ ಹೇಳಿದೆ.
ಈಗಾಗಲೇ ಫೋಕ್ಸ್‌ವ್ಯಾಗನ್ ಹಗರಣದಿಂದ ಹೊಡೆತಕ್ಕೀಡಾಗಿರುವ ಜಾಗತಿಕ ಕಾರು ಉದ್ಯಮಕ್ಕೆ ಇದು ಮತ್ತೊಂದು ಹೊಡೆತವಾಗಿದೆ. ವೋಲ್ವೊ ಎಸ್60, ರೆನಾಲ್ಟ್‌ನ ಎಸ್ಪೇಸ್ ಎನರ್ಜಿ ಮತ್ತು ಜೀಪ್ ರೆನಗೇಡ್ ವಾಹನಗಳು ನೈಟ್ರೋಜನ್ ಆಕ್ಸೈಡ್ ಹೊರಸೂಸುವಿಕೆಯ ಐರೋಪ್ಯ ಮಿತಿಗಿಂತ 10 ಪಟ್ಟಿಗೂ ಅಧಿಕ ಮಾಲಿನ್ಯವನ್ನು ಹೊರಸೂಸುತ್ತಿವೆ ಎಂದು ಅದು ಹೇಳಿದೆ.
ನಿಸಾನ್ ಕಂಪೆನಿಯ ಎಕ್ಸ್-ಟ್ರೇಲ್ 14 ಪಟ್ಟು ಮಾಲಿನ್ಯ ಹೊರಸೂಸುತ್ತದೆ ಎಂದಿದೆ.
ಅಂತರಾಷ್ಟ್ರೀಯ