ರಾಷ್ಟ್ರೀಯ

ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮಕ್ಕೆ ಬಿಲ್!

Pinterest LinkedIn Tumblr

electricityಕಾನ್ಪುರ: 2,000 ಬಿಲ್ ಪಡೆಯುತ್ತಿದ್ದ ಕುಟುಂಬ ಕೋಟಿ ರೂಪಾಯಿ ಬಿಲ್ ಪಡೆದಂತಹ ಸಂಗತಿಗಳನ್ನು ಓದೇ ಇರುತ್ತಿರಾ. ವಿದ್ಯುತ್ ಇಲಾಖೆಯ ಇಂತಹ ಎಡವಟ್ಟುಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದು ಸ್ವಲ್ಪ ಭಿನ್ನ ರಗಳೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಪ್ರತಿಯೊಬ್ಬರಿಗೂ ತಲಾ 20,000 ಬಿಲ್ ಬಂದಿದೆ. ವಿಪರ್ಯಾಸದ ಸಂಗತಿ ಎಂದರೆ ಆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ನಯಾ ಪೂರ್ವಾ ಎಂಬ  ಆ ಹಳ್ಳಿಯವರು ತಮ್ಮ ಊರಿನ ಯಾವ ಮನೆಗಳಲ್ಲೂ ಸಹ ಒಂದು ಬಲ್ಬ್‌ನ್ನು ಸಹ ನೋಡಿಲ್ಲ.

ಕಾನ್ಪುರ ಜಿಲ್ಲೆಯ ಈ ಅತಿ ಹಿಂದುಳಿದ ಗ್ರಾಮವೊಂದರ ಬಡ ಜನ ಈ ಬಿಲ್ ನೋಡಿ ನೋಡಿ ಅಳಬೇಕೋ, ನಗಬೇಕೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ನಮ್ಮ ಊರಿನಲ್ಲಿ ವಿದ್ಯುತ್ ಬಿಡಿ, ಒಂದು ವಿದ್ಯುತ್ ಕಂಬವೂ ಇಲ್ಲ ಎಂದು ಹೇಳುತ್ತಾರೆ ಗ್ರಾಮ ಪ್ರಧಾನ ಶ್ಯಾಮ್‌ಜಿ.

“ವಿದ್ಯುತ್ ಇಲಾಖೆಯ ಅಧಿಕಾರಿಗಳು ಬಿಲ್ ಕಟ್ಟಿ ಎಂದು ನಮ್ಮ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಿಲ್ ಕಟ್ಟದಿದ್ದರೆ ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳುತ್ತೇವೆ”, ಎಂದು ಬೆದರಿಕೆ ಹಾಕಿದ್ದಾರೆ ಎನ್ನುತ್ತಾರೆ ಶ್ಯಾಮ್‌ಜಿ.

ಇದು ಹಾಸ್ಯಾಸ್ಪದವಾಗಿ ಕಾಣುತ್ತಿರಬಹುದು, ಆದರೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ತಮ್ಮ ಮೊಂಡುವಾದವನ್ನು ಮುಂದುವರೆಸಿದ್ದಾರೆ. ‘ಬಿಲ್ ಬಂದಿದೆ ಎಂದರೆ ಅವರೆಲ್ಲಾ ವಿದ್ಯುತ್ ಬಳಸಿದ್ದಾರೆ’, ಎಂದೇ ಅರ್ಥ, ಎನ್ನುತ್ತಾರೆ ಉತ್ತರ ಪ್ರದೇಶ್ ವಿದ್ಯುತ್ ಇಲಾಖೆಯ ಎಸ್‌ಡಿಓ ನರೇಶ್ ಸಿಂಗ್.

,ಅಲ್ಲಿ ವಿದ್ಯುತ್ ಸಂಪರ್ಖವಿದೆಯೇ ಎಂಬುದನ್ನು ನೀವು ಪರಿಶೀಲಿಸಿದ್ದೀರಾ,? ಎಂದು ಕೇಳಿದರೆ, ‘ಅದರ ಅಗತ್ಯವೇ ಇಲ್ಲ ಮೀಟರ್ ರೀಡರ್ಸ್‌ಗಳಿದ್ದಾರೆ ಅಲ್ಲಿ’, ಎಂದು ಬೇಜವಾಬ್ದಾರಿಯಿಂದ ನುಡಿಯುತ್ತಾರೆ ಸಿಂಗ್.

Write A Comment