ಅಂತರಾಷ್ಟ್ರೀಯ

ಪುಟ್ಟ ರೋಬೊಟ್‌ ಜಿರಲೆ ಆವಿಷ್ಕಾರ ! ಇದನ್ನು ಅಭಿವೃದ್ಧಿ ಪಡಿಸಿದ್ದಾದರೂ ಏಕೆ ಗೊತ್ತಾ ?

Pinterest LinkedIn Tumblr

robot

ಮಾಸ್ಕೊ : ಕಟ್ಟಡ ಕುಸಿತ ಹಾಗೂ ಇನ್ನಿತರ ಅಪಘಾತಗಳು ಸಂಭವಿಸಿದಾಗ ಅವಶೇಷಗಳ ಅಡಿ ಸಿಲುಕಿರುವವರನ್ನು ಗುರುತಿಸಲು ಅನುಕೂಲವಾಗುವಂತಹ ಪುಟ್ಟ ರೋಬೊಟ್‌ ಜಿರಲೆಗಳನ್ನು ರಷ್ಯಾದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ರಷ್ಯಾದಲ್ಲಿನ ಇಮ್ಯಾನುಯಲ್‌ ಕಾಂಟ್‌ ಬಾಲ್ಟಿಕ್‌ ಫೆಡರಲ್‌ ವಿಶ್ವವಿದ್ಯಾಲಯದ ಸಂಶೋಧಕರು ಯಾಂತ್ರಿಕ ಜಿರಲೆಯ (ರೋಬೊಟ್‌) ಮಾದರಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಕೇವಲ ರಕ್ಷಣಾ ಕಾರ್ಯಚರಣೆ ವೇಳೆ ಅಲ್ಲದೆ ಗೂಢಾಚಾರಿಕೆಗೂಈ ಚಿಕ್ಕ ಜಿರಲೆ ರೋಬೊಟನ್ನು ಬಳಸಬಹುದಾಗಿದೆ. ಈ ರೊಬೊ ಜೀವಂತ ಜಿರಲೆಯಂತೆಯೇ ಕಾಣುವುದಲ್ಲದೆಅದರಂತಯೇ ಕಾರ್ಯನಿರ್ವಹಿಸುತ್ತದೆ ಮತ್ತು ಅಷ್ಟೇ ಗಾತ್ರವನ್ನೂಹೊಂದಿದೆ.

‘ಆಕಾರ, ಕೆಲಸ, ಗಾತ್ರ ಈ ಮೂರರ ನಡುವೆ ಸಮತೋಲನ ಕಾಯ್ದುಕೊಳ್ಳುವುದೇ ರೋಬೊಟ್‌ ರೂಪಿಸುವಲ್ಲಿನ ಅತ್ಯಂತ ಕಠಿಣ ಭಾಗ’ ಎಂದು ಈ ಸಂಶೋಧನೆಯಪ್ರಮುಖ ಎಂಜಿನಿಯರ್‌ ಅಲೆಕ್ಸಿ ಬೆಲೌಸೊವ್ ತಿಳಿಸಿದ್ದಾರೆ.

Write A Comment