ಅಂತರಾಷ್ಟ್ರೀಯ

11 ವರ್ಷದ ಮಗನೇ ಅಮ್ಮನಿಗೆ ಡೆಲಿವರಿ ಮಾಡಿಸಿದ !

Pinterest LinkedIn Tumblr

baby

ವಾಷಿಂಗ್ಟನ್: ಮಕ್ಕಳೇ ದೇವರು ಎನ್ನುವ ಒಂದು ಮಾತನ್ನು ನೀವು ಕೇಳಿರಬಹುದು. ಆದರೆ ಅಮೆರಿಕದ ತಾಯಿ ಒಬ್ಬರಿಗೆ ಅವರ 11 ವರ್ಷದ ಮಗನೇ ಡೆಲಿವರಿ ಮಾಡಿಸುವ ಮೂಲಕ ದೇವರಾಗಿದ್ದಾನೆ.

ಆಗಿದ್ದು ಇಷ್ಟು, ಜಾರ್ಜಿಯದಲ್ಲಿ ನೆಲೆಸಿರುವ ಗರ್ಭಿಣಿ ಕೆನ್ಯಾರ್ಡ ಅವರಿಗೆ ವೈದ್ಯರು ನೀಡಿರುವ ಹೆರಿಗೆ ದಿನಾಂಕದ ಮೊದಲೇ ಹೆರಿಗೆ ನೋವು ಕಾಣಿಸಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅವರ ಮನೆಯಲ್ಲಿ 11 ವರ್ಷದ ಮಗ ಬಿಟ್ಟರೆ ಬೇರೆ ಯಾರು ಇರಲಿಲ್ಲ. ಹೆರಿಗೆ ನೋವು ಕಾಣಿಸಿದ ಕೂಡಲೇ ತಾಯಿ 911 ನಂಬರ್‍ಗೆ ಕರೆ ಮಾಡು ಎಂದು ಜೇಮ್ಸ್ ನಿಗೆ ಹೇಳಿದ್ದಾರೆ. ಈ ನಂಬರ್‍ಗೆ ಕರೆ ಮಾಡಿದ ಜೇಮ್ಸ್ ಅಲ್ಲಿಂದ ಬಂದ ಸೂಚನೆಗಳನ್ನು ಕೇಳಿಕೊಂಡೆ ತಾಯಿಗೆ ಡೆಲಿವರಿ ಮಾಡಿಸಿದ್ದಾನೆ.

ಕಳೆದ ವಾರ ಈ ಘಟನೆ ನಡೆದಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. “ಇವನು ನನ್ನ ಮಗ ಮಾತ್ರ ಅಲ್ಲ, ಈತ ನನ್ನ ವೈದ್ಯ, ನನ್ನ ಪಾಲಿನ ಸೂಪರ್ ಹೀರೋ” ಎಂದು ಹೇಳುವ ಮೂಲಕ ತಾಯಿ ಮಗನ ಕಾರ್ಯವನ್ನು ಹೊಗಳಿದ್ದಾರೆ.

Write A Comment