ಅಂತರಾಷ್ಟ್ರೀಯ

ಯೆಮೆನ್: ಮದುವೆ ದಿಬ್ಬಣದ ಮೇಲೆ ವೈಮಾನಿಕ ದಾಳಿ, 35 ಮಂದಿ ಸಾವು

Pinterest LinkedIn Tumblr

air-strike-hits-yemenಸನಾ: ಹಿಂಸಾಚಾರ ಪೀಡಿತ ಯೆಮೆನ್ ನಲ್ಲಿ ಸೋಮವಾರ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ ಮದುವೆ ದಿಬ್ಬಣವೊಂದರ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ ಎಂದು  ತಿಳಿದುಬಂದಿದೆ.

ಯೆಮೆನ್ ನ ನೈಋತ್ಯ ಕೆಂಪುಸಮುದ್ರದ ಮೊಚಾ ಬಂದರಿನ ಸಮೀಪ ಇರುವ ಟಾಯಿಜ್ ಪ್ರಾಂತ್ಯದ ವಾಹಿಜಾಹ್ ಗ್ರಾಮದಲ್ಲಿ ಈ ಭೀಕರ ಘಟನೆ ಸಂಭವಿಸಿದ್ದು, ಕನಿಷ್ಟ 35ಕ್ಕೂ ಹೆಚ್ಚು  ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿದವರಲ್ಲಿ 8 ಮಂದಿ ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ. ಹೌಥಿ ಬಂಡುಕೋರರ ದಮನಕ್ಕಾಗಿ ಸೌದಿ ಅರೇಬಿಯಾ  ನೇತೃತ್ವದ ಮೈತ್ರಿ ಪಡೆಗಳು ಯೆಮೆನ್ ಮೇಲೆ ಕಳೆದ ಮಾರ್ಚ್ ತಿಂಗಳಿಂದ ಆಗಾಗ ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದು, ರಾಷ್ಟ್ರದ ಬಹುಭಾಗವನ್ನು ಬಂಡುಕೋರರು ಈ ವರ್ಷದ  ಆದಿಯಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಹೌಥಿ ಗುಂಪಿನ ಜೊತೆಗೆ ಸಂಪರ್ಕ ಇದ್ದ ಸ್ಥಳೀಯ ವ್ಯಕ್ತಿಯೊಬ್ಬನ ಮದುವೆ ಸಲುವಾಗಿ ಹಾಕಲಾಗಿದ್ದ ಎರಡು ಟೆಂಟ್​ಗಳ ಮೇಲೆ ವಾಯುದಾಳಿ ನಡೆದಾಗ ಸಾವು-ನೋವಾಗಿದ್ದು, ಈ ಪೈಕಿ  8 ಮಕ್ಕಳು, 12 ಮಂದಿ ಮಹಿಳೆಯರು ಮತ್ತು 7 ಮಂದಿ ಪುರುಷರು ಸೇರಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಇನ್ನು ವೈಮಾನಿಕ ದಾಳಿ ಬಗ್ಗೆ ಸ್ಪಷ್ಟನೆ ನೀಡಿರುವ  ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು “ಈ ವೈಮಾನಿಕ ದಾಳಿಯನ್ನು ತಪ್ಪಾಗಿ ನಡೆಸಲಾಗಿದೆ” ಎಂದು ಹೇಳಿದ್ದಾರೆ.

ಒಟ್ಟಾರೆ ಸೌದಿ ಪಡೆಗಳ ಈ ವೈಮಾನಿಕ ದಾಳಿಯಿಂದಾಗಿ ಮದುವೆ ಸಂಭ್ರಮದಲ್ಲಿದ್ದ ದಿಬ್ಬಣ ಕೆಲವೇ ನಿಮಿಷಗಳಲ್ಲಿ ಮಸಣವಾಗಿ ಮಾರ್ಪಟ್ಟಿದೆ.

Write A Comment