ಅಂತರಾಷ್ಟ್ರೀಯ

ವಿಧ್ಯಾರ್ಥಿಯಾಗಿದ್ದಾಗ ನಾಪತ್ತೆಯಾಗಿದ್ದ ಯುವತಿ 31 ವರ್ಷ ಬಳಿಕ ಪತ್ತೆ !

Pinterest LinkedIn Tumblr

Missing-Lady1

ಬರ್ಲಿನ್,ಸೆ.29: 1984ರಲ್ಲಿ ನಾಪತ್ತೆಯಾಗಿದ್ದ ಮಹಿಳೆ ಕೊಲೆಯಾಗಿರಬಹುದೆಂದು ಶಂಕಿಸಿ ಶೋಧ ಕಾರ್ಯ ನಡೆಸಿದ ಜರ್ಮನ್ ಪೊಲೀಸರಿಗೆ 31 ವರ್ಷಗಳ ಬಳಿಕ ಅದೇ ಮಹಿಳೆ ಡ್ಯುಸೆಲ್‍ಡೋರ್ಫ್‍ನಲ್ಲಿ ಪತ್ತೆಯಾಗಿದ್ದಾಳೆ.

ಪೆಟ್ರಾ ಪಝಿಸ್ತಕಾ 1984ರಲ್ಲಿ ಕಣ್ಮರೆಯಾಗಿದ್ದಳು. ಆಕೆ ಕಣ್ಮರೆಯಾದ ಐದು ವರ್ಷಗಳ ಬಳಿಕ ಆಕೆ ಸತ್ತಿದ್ದಾಳೆಂದು ಘೋಷಿಸಲಾಯಿತು. ಆಕೆಯನ್ನು ಕೊಲೆ ಮಾಡಿರಬಹುದಾದ ಆರೋಪಿ ಪತ್ತೆಗೆ ಪೊಲೀಸರು ಶೋಧಕಾರ್ಯ ಚುರುಕುಗೊಳಿಸಿದರು.

ದರೋಡೆ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಗುರುತಿನ ಚೀಟಿ ಇಲ್ಲದ 55 ವರ್ಷ ವಯಸ್ಸಿನ ಮಹಿಳೆ ಪತ್ತೆಯಾಗಿದ್ದಾಳೆ. ವಿಚಾರಣೆ ನಡೆಸಿದಾಗ ತಾನು ಸುಳ್ಳು ಗುರುತಿನ ಚೀಟಿ ಪಡೆದು ಬದುಕುತ್ತಿದ್ದು, ತನ್ನ ವಾಸ್ತವ ಗುರುತನ್ನು ದೊರಕಿಸಿಕೊಡುವಂತೆ ಕೇಳಿಕೊಂಡಿದ್ದಾಳೆ.

ಪಝಿಸ್ತಕಾ ಗುರುತು ಪತ್ತೆಯಾಗಿದ್ದೇ ಆಗ. 1984ರಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಈಕೆ ನೂತನ ಜೀವನ ಕಂಡುಕೊಳ್ಳಲು ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ತಾನು ವಾಸವಿದ್ದ ಕೊಠಡಿಯನ್ನು ತೊರೆದು ಏಕಾಏಕಿ ನಾಪತ್ತೆಯಾಗಿದ್ದಳು. ಈಕೆ ಕೊಲೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದರು. ಇದೀಗ ಈ ಪತ್ತೆಯಾಗಿರುವುದು, ಜೀವಂತವಾಗಿರುವುದನ್ನು ಕಂಡು ಕುಟುಂಬಸ್ಥರು ಬೆರಗಾಗಿದ್ದಾರೆ.

Write A Comment