ರಾಷ್ಟ್ರೀಯ

ಮನೆ ವಿದ್ಯುತ್ ಬಿಲ್ 85 ಕೋಟಿ ರೂಪಾಯಿ!

Pinterest LinkedIn Tumblr

bill

ಗುರಗಾಂವ್, ಸೆ. 29: ಸಾಮಾನ್ಯವಾಗಿ ಒಂದು ಮನೆಯ ವಿದ್ಯುತ್ ಬಿಲ್ 500 ರಿಂದ 1 ಸಾವಿರ ರೂ. ಬರಬಹುದು. ಆದರೆ ಇಲ್ಲಿನ ನಿವಾಸಿಯೊಬ್ಬರ ಮನೆಗೆ ಬರೋಬ್ಬರಿ 85 ಕೋಟಿ ರೂ. ವಿದ್ಯುತ್ ಬಿಲ್ ಬಂದಿದೆ.

ಹೊದಲ್ ಪ್ರಸಾದ್ ಎಂಬುವವರ ನಿವಾಸಕ್ಕೆ ಈ ದುಬಾರಿ ವಿದ್ಯುತ್ ಬಿಲ್ ಬಂದಿದ್ದು, ಮನೆಯವರಿಗೆ ದಿಗ್ಭ್ರಮೆ ಉಂಟುಮಾಡಿದೆ. ಈ ಹಿಂದೆ ಪ್ರಸಾದ್‌ರವರ ಮನೆಗೆ 2 ಸಾವಿರದಿಂದ ಹೆಚ್ಚೆಂದರೆ 6 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಅಲ್ಲದೆ ಮನೆಯಲ್ಲಿ ಅಳವಡಿಸಿರುವ ಮೀಟರ್‌ನಲ್ಲಿ ಸಂಖ್ಯೆಯನ್ನು ತೋರಿಸುತ್ತಿಲ್ಲ ಎಂದು ದೂರು ನೀಡಿ ಬಂದ ಕೆಲ ದಿನಗಳಲ್ಲಿಯೇ ವಿದ್ಯುತ್ ಕಂಪನಿಯವರು 85 ಕೋಟಿ ರೂ. ಬಿಲ್ ನೀಡಿದ್ದಾರೆ ಎಂದು ಹೊದಲ್ ಪ್ರಸಾದ್ ತಿಳಿಸಿದ್ದಾರೆ.

6 ಸಾವಿರ ರೂ. ಬಂದಾಗಲೇ ನಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಬರೋಬ್ಬರಿ 85 ಕೋಟಿ ರೂ. ಬಿಲ್ ಬಂದಿದೆ. ಇದರಿಂದ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ ಎಂದಿದ್ದಾರೆ.

Write A Comment