ಅಂತರಾಷ್ಟ್ರೀಯ

ಕಿಲ್ಲರ್ ಕ್ಯಾಂಡಿ ಕ್ರಷ್; ಗೇಮ್ನಿಂದ ಮಾನಸಿಕ ಪ್ರಳಯ

Pinterest LinkedIn Tumblr

Candy-crush-sagaಕ್ಯಾಂಡಿಕ್ರಷ್ ಸಾಗಾ-ದಿನಂಪ್ರತಿ ಜಗತ್ತಿನ 20 ಕೋಟಿ ಜನ ಆಡುವ ಆಟ. ಸುಲಭವಾಗಿ ಆಡಬಹುದಾದ ಈ ಕ್ಯಾಂಡಿಕ್ರಷ್ ಸೃಷ್ಟಿಸುವ ಅಪಾಯ ಮಾತ್ರ ಪ್ರಳಯಕ್ಕೆ ಸಮ…

ಮೊನ್ನೆ ಅಪ್ಪಳಿಸಿದ ಸುದ್ದಿಗಳು. ಲಾಸ್ ಏಂಜಲೀಸ್‍ನ ಯುವಕನ ಹೆಬ್ಬೆರಳು ಕ್ಯಾಂಡಿಕ್ರಷ್ ಆಡಿಯೇ ನಜ್ಜುಗುಜ್ಜಾಗಿದೆ. ಅದೇ ಅಮೆರಿಕದ ಇನ್ನೊಂದು ವ್ಯಕ್ತಿಯ ಫಿಂಗರ್ ಪ್ರಿಂಟ್  ತ್ಯಾಸಗೊಂಡಿದ್ದು  ಇದೇ ಕ್ಯಾಂಡಿಕ್ರಷ್‍ನ ಕಾರಣಕ್ಕೆ. ಇದು ಕೇವಲ ದೈಹಿಕ ಅಪಾಯ. ಆದರೀ ಆಟ ಎಸಗುವ ಮಾನಸಿಕ  ಪ್ರಳಯಕ್ಕೆ ಕೊನೆಯೆಂಬುದಿಲ್ಲ. ಕ್ಯಾಂಡಿಕ್ರಷ್ ಸಾಗಾಗೆ ನಾವೇಕೆ ಅಂಟಿಕೊಳ್ಳುತ್ತೇವೆ  ಎಂದು ಕೇಳಿದರೆ, ಗೇಮ್ಸ್ ಸಂಶೋಧಕ ಜೆಸ್ಪರ್ ಜೂಲ್ ಹೇಳುವುದು `ಈ  ಆಟವನ್ನು ಸುಲಭವಾಗಿ ಕಲಿಯಬಹುದು’ ಎಂದು. ಸುಲಭವಾಗಿ ಕಲಿಯುವ ಆಟವನ್ನು, `ನಾ ಸುಲಭವಾಗಿ  ಬಿಟ್ಟೆ’  ಎನ್ನುವವರು ಕೈಯೆತ್ತಿ. ದಿನಂಪ್ರತಿ 20 ಕೋಟಿ ಜನ ಸಕ್ರಿಯ ಆಟಗಾರರಲ್ಲಿ ಒಬ್ಬನೂ ಕೈಯೆತ್ತಲಾರ. ಅವನ ಕೈಗಳಿಗೆ ಪುರುಸೊತ್ತೆಲ್ಲಿ?

ಹೇಗೆ ಈ ಕ್ರಷ್?:

ನಮ್ಮ ಮನಸ್ಸನ್ನು ಇದು ಹೇಗೆ ಹೈಜಾಕ್ ಮಾಡುತ್ತದೆಂಬುದಕ್ಕೆ ಮನಃಶಾಸ್ತ್ರಜ್ಞರು ದೊಡ್ಡ ಪಟ್ಟಿ ಕೊಡುತ್ತಾರೆ. ಈ ಸುಲಭದ ಆಟವನ್ನು ಎಲ್ಲ ಏಜಿನವರೂ ಆಡಬಹುದು. ಕಣ್ಣನ್ನು ರಂಜಿಸುವ    ಬಣ್ಣಬಣ್ಣದ  ಗ್ರಿಡ್ಡಿನ ಮೇಲೆ ದೃಷ್ಟಿ ಮೋಹಗೊಳ್ಳುತ್ತದೆ. ಆರಂಭದಲ್ಲಿ ಇಲ್ಲಿ ನಿಮಗೆ ಜೀವದಾನ ಸಿಗುತ್ತದೆ. ಲೆವೆಲ್‍ಗೂ  ಮಧ್ಯ ಒಂದು ರಿಲ್ಯಾಕ್ಸ್ ಸಿಗುತ್ತದೆ. ನೀವಿಲ್ಲಿ 3 ಅಥವಾ 3ಕ್ಕಿಂತ ಹೆಚ್ಚು  ಡಿಗಳನ್ನು ಮ್ಯಾಚ್ ಮಾಡುವಾಗ, ಸಣ್ಣಸಣ್ಣ ಯಶಸ್ಸುಗಳಿಂದಲೇ ಸಂತೃಪ್ತರಾಗುತ್ತೀರಿ. ಕ್ಯಾಂಡಿಕ್ರಷ್ ನಿಮ್ಮನ್ನು ಅಪಹರಿಸುವುದು ಈ ಖುಷಿಯಲ್ಲೇ.

ನೀವು ಇದಕ್ಕೆ ಅಡಿಕ್ಟಾಗಲು ಇದರ `ಸ್ವೀಟ್’  ಅಥವಾ `ಡಿಲೀಸಿಯಸ್’ ಪದಗಳೇ ಸಾಕು. ಕೊಂಚ ಬಿಡುವಿದ್ದಾಗ ಯಾರೂ ಕಠಿಣ ಸವಾಲೊಡ್ಡುವ ಗೇಮ್ಗಳನ್ನು ಇಷ್ಟಪಡುವುದಿಲ್ಲ.  ಈ ಮಧ್ಯೆ ಫೇಸ್‍ಬುಕ್- ಟ್ವಿಟ್ಟರ್‍ನಲ್ಲೂ ನೀವಿದ್ದು ಬಿಟ್ಟರೆ ನಿಮಗಿಂತ ಹೆಚ್ಚು ಲೆವೆಲ್ ಆಡ್ತಿರೋರೂ ಕಾಣಿಸುತ್ತಾರೆ. ಅವರನ್ನು ಹಿಂದಿಕ್ಕುವ ಹುಚ್ಚು ಬೆಳೆಯುತ್ತದೆ. ಇದನ್ನು ಆಡ್ತಿರೋದು ನಾನೊಬ್ಬನೇ ಅಲ್ಲ ಎಂಬ ಖುಷಿಗೂ ಪಾತ್ರರಾಗ್ತೀರಿ.

ಪಾರಾಗೋದು ಹೇಗೆ?

1 ಈ ಗೇಮ್ ಆ್ಯಪ್ ಕಣ್ಮುಂದೆ ಇದ್ದರೆ ತಾನೆ ಆಡೋದು? ರಿಮೂವ್ ಮಾಡಿ.

2 ಕೆಲ ಕಾಲ ನೆಟ್ ಫಾಸ್ಟಿಂಗ್ ಅಥವಾ ಇಂಟರ್ನೆಟ್‍ನಿಂದ ದೂರವಿರುವುದನ್ನು ರೂಢಿಸಿಕೊಳ್ಳಿ.

3 ಸಮಯ- ಹಣ ಎರಡೂ ವ್ಯಯವಾಗೋದ್ರಿಂದ ನಿಮಗೆ ನೀವೆ ನಷ್ಟವಾಗ್ತಿದ್ದೀರಿ ಎಂಬುದು ಗೊತ್ತಿರಲಿ.

4 ಓದುವುದು, ದೈಹಿಕ ಸಕ್ರಿಯತೆ ಬಯಸುವ ಕ್ರೀಡೆಗಳತ್ತ ಒಲವು ತೋರಿಸಿ.

5 ಒಂದು ಆಟ ಅರಿತಾದ ಮೇಲೆ, ಅಲ್ಲೇನೂ ಬದನೆಕಾಯಿ ಇಲ್ಲ ಎಂಬ ನಿರ್ಲಕ್ಷ್ಯ ರೂಢಿಸಿಕೊಳ್ಳಿ.

ಕ್ರಷ್ ತರುವ ಕಷ್ಟಗಳು

-ಇದು ಕುಳಿತಲ್ಲೇ ಆಡೋ ಆಟ. ದೈಹಿಕ ಚಟುವಟಿಕೆಯ ಕೊರತೆ ಶುರುವಾಗುತ್ತೆ. ಬೇರೆ ಆಟ, ವ್ಯಾಯಾಮಗಳತ್ತ ಮನಸ್ಸು ಸರಿಯದೆ ಸೋಮಾರಿತನ ಬೆಳೆಸಿಕೊಳ್ಳುತ್ತೀರಿ.

-ನೀವು ಒಂದೇ ಪೊಸಿಸಷನ್ ನಲ್ಲಿ ಕುಳಿತು ಆಡೋದ್ರಿಂದ ರಕ್ತಚಲನೆ ನಿಧಾನಗೊಳ್ಳುತ್ತೆ. ಅಂಗಾಂಗ ವಿಶೇಷವಾಗಿ ಭುಜ-ಕೈಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ.

-ಗೇಮ್ ಗೆ ಹೆಚ್ಚು  ಅಡಿಕ್ಟಾದಾಗ ಊಟ ಬಿಡುತ್ತೀರಿ. ನಿಧಾನವಾಗಿ  ನಿದ್ದೆ ಮಧ್ಯೆಯೂ ಕ್ಯಾಂಡಿ ಬಂದಹಾಗಾಗುತ್ತೆ. ಇದರಿಂದ ಬೇರೆ ಸಂಗತಿಗಳತ್ತ ಏಕಾಗ್ರತೆ ಅಸಾಧ್ಯ. ಹಾಗೂ ನೀವು ಆದ್ಮೇಲೂ ಮೊಬೈಲ್ ಹಿಡಿದು ಕುಳಿತರೆ ಜೀರ್ಣಶಕ್ತಿಯ ಕೊರತೆ ಶುರು. ಇಂಥ ಗೇಮ್ ವೇಳೆ ಜಂಕ್ ಫುಡ್ ಸೇವನೆಯೂ ಹೆಚ್ಚಾಗೋದ್ರಿಂದ ಕೊಬ್ಬು ವೃದ್ಧಿಸುತ್ತದೆ.

-ಕುಳಿತು ಆಡೋದ್ರಿಂದ ಸೊಂಟನೋವು, ಕುತ್ತಿಗೆ- ಭುಜನೋವು ಬರಬಹುದು.

-ಈ ಆಟವನ್ನು ಸುದೀರ್ಘ ಆಡೋದ್ರಿಂದ ಕಣ್ಣಿಗೆ ಹೆಚ್ಚು ಕೆಲಸವಾಗಿ, ಆ ಕೃತಕ ಬೆಳಕಿಗೆ ಡ್ರೈ ಐಸ್ ಆಗಬಹುದು. ಚಿಕ್ಕ ಚಿಕ್ಕ ಕ್ಯಾಂಡಿಗಳನ್ನು ನೋಡುವುದು ದೃಷ್ಟಿಗೂ ಸಮಸ್ಯೆ.

-ದಿನದಲ್ಲಿ ನೀವು ಒಂದೂವರೆ ಗಂಟೆ ಆಡಿದರೆ ಎಂದರೆ ಇನ್ ಸೋನ್ಮಿಯಾ (ನಿದ್ರಾಹೀನತೆ) ಅಪ್ಪಳಿಸುತ್ತದೆ.

-ಓದುವಿಕೆ ಮೇಲೆ ಪರಿಣಾಮ ಬೀಳುತ್ತದೆ, ಹಣವೂ ಪೋಲು  ಸಮಯವೂ ಪೋಲಾಗೋದ್ರಿಂದ ಖಿನ್ನತೆ ನಿಶ್ಚಿತ.

-ವಿಶೇಷವಾಗಿ ನಿಮ್ಮ ಕ್ರಿಯೇಟಿವಿಟಿಯನ್ನೇ ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತದೆ ಕ್ಯಾಂಡಿಕ್ರಷ್.

-ಸಿಟ್ಟು ಏರಬಹುದು, ಸೋಲುತ್ತಿದ್ದರೆ ನಿಮ್ಮ ಮೇಲೆಯೇ ಹತಾಶೆ ಶುರುವಾಗಬಹುದು.

Write A Comment