ಅಂತರಾಷ್ಟ್ರೀಯ

‘ಗಡಿಯಾರ’ ಬಾಲಕ ಗೂಗಲ್ ಫೇರ್‌ಗೆ ಅತಿಥಿ

Pinterest LinkedIn Tumblr

2videshiಹ್ಯೂಸ್ಟನ್, ಸೆ.22: ವಿನೂತನ ಗಡಿಯಾರವನ್ನು ತಯಾರಿಸಿದ ಕಾರಣಕ್ಕಾಗಿ ತಪ್ಪುಗ್ರಹಿಕೆಯಿಂದಾಗಿ ಕಳೆದ ವಾರ ಬಂಧನಕ್ಕೊಳಗಾಗಿದ್ದ 14ರ ಹರೆಯದ ಮುಸ್ಲಿಮ್ ಬಾಲಕ ಅಹ್ಮದ್ ಮುಹಮ್ಮದ್ ಕ್ಯಾಲಿಫೋರ್ನಿಯದಲ್ಲಿ ನಡೆದ ಗೂಗಲ್ ಸೈನ್ಸ್ ವಾರ್ಷಿಕ ಮೇಳದ ಅತಿಥಿಯಾಗಿ ಅಚ್ಚರಿ ಮೂಡಿಸಿದ್ದಾನೆ.
ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಟೆಕ್ಸಾಸ್‌ನಲ್ಲಿರುವ ಸುಡಾನ್ ಮೂಲದ ಅಮೆರಿಕನ್ ಬಾಲಕ ವಿನೂತನ ಮಾದರಿಯ ಗಡಿಯಾರ ತಯಾರಿಸಿದ್ದು, ಅದನ್ನು ಬಾಂಬ್ ಎಂದು ತಪ್ಪಾಗಿ ಗ್ರಹಿಸಿದ ಶಾಲಾ ಸಿಬ್ಬಂದಿ ಬಾಲಕನ ಬಂಧನಕ್ಕೆ ಕಾರಣರಾಗಿದ್ದರು.
ಬಾಲಕ ಮುಹಮ್ಮದ್ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ರಿಂದಲೂ ಆತಿಥ್ಯ ಪಡೆದಿದ್ದಾನೆ.

Write A Comment