ಅಂತರಾಷ್ಟ್ರೀಯ

ಶೇಖ್ ಹಸೀನಾಗೆ ವಿಶ್ವಸಂಸ್ಥೆಯ ಪ್ರಶಸ್ತಿ

Pinterest LinkedIn Tumblr

3sheikh-hasinaವಿಶ್ವಸಂಸ್ಥೆ, ಸೆ.15: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಹವಾಮಾನ ಬದಲಾವಣೆ ವಿಷಯಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಕೊಡಮಾಡುವ ಪ್ರತಿಷ್ಠಿತ ‘ಯುಎನ್ ಚಾಂಪಿಯನ್ಸ್ ಆಫ್ ಅರ್ತ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹವಾಮಾನ ಬದಲಾವಣೆ ಯನ್ನು ಒಂದು ರಾಷ್ಟ್ರೀಯ ವಿಷಯವನ್ನಾಗಿ ಮಾಡುವಲ್ಲಿ ಹಾಗೂ ಈ ನಿಟ್ಟಿನಲ್ಲಿ ಜಾಗತಿಕ ಸ್ಪಂದನವನ್ನು ಸಮರ್ಥಿಸು ಲ್ಲಿ ವಹಿಸಿರುವ ಮಹತ್ವದ ಪಾತ್ರ ಹಾಗೂ ದೃಷ್ಟಿಕೋನವನ್ನು ಪರಿಗಣಿಸಿ ಹಸೀನಾರಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಪ್ರಸಕ್ತ ಶೇಖ್ ಹಸೀನಾ ಅವರು ಜಗತ್ತಿನ ಕನಿಷ್ಠ ಅಭಿವೃದ್ಧಿಹೊಂದಿರುವ ರಾಷ್ಟ್ರಗಳಲ್ಲೊಂದೆನಿಸಿರುವ ಬಾಂಗ್ಲಾದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಹೂಡಿಕೆಯು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಪೂರಕವೆಂಬುದನ್ನು ಹಸೀನಾ ಸಾಬೀತುಪಡಿಸಿದ್ದಾರೆ ಎಂದು ಪ್ರಶಸ್ತಿ ಕೊಡಮಾಡುವ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್‌ಇಪಿ) ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸುಮಾರು 159 ದಶಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬಾಂಗ್ಲಾದೇಶವು ಜಗತ್ತಿನಲ್ಲೇ ಅತ್ಯಧಿಕ ಜನಸಂಖ್ಯೆಯ ರಾಷ್ಟ್ರವಾಗಿದೆ. ಮಾತ್ರವಲ್ಲದೆ ಹವಾಮಾನ ಬದಲಾವಣೆಯ ವೈಪರೀತ್ಯವನ್ನು ಎದುರಿಸುವಲ್ಲಿ ಅತಿದುರ್ಬಲ ರಾಷ್ಟ್ರವೂ ಇದಾಗಿದೆ. ಬಾಂಗ್ಲಾದೇಶದ ಇತಿಹಾಸದುದ್ದಕ್ಕೂ ಚಂಡಮಾರುತಗಳು, ಪ್ರವಾಹಗಳು ಹಾಗೂ ಬರ ಕಾಣಿಸಿ ಕೊಂಡಿದೆ.

ಬಾಂಗ್ಲಾದೇಶವು ತನ್ನದೇ ಆದ ‘ಹವಾಮಾನ ಬದಲಾವಣೆ ಟ್ರಸ್ಟ್ ಫಂಡ್’ ಸ್ಥಾಪಿಸಿರುವ ಮೊದಲ ರಾಷ್ಟ್ರವಾಗಿದ್ದು, 2009-12ರ ಅವಧಿಯಲ್ಲಿ ಸುಮಾರು 300 ದಶಲಕ್ಷ ಅಮೆರಿಕನ್ ಡಾಲರ್ ನೆರವನ್ನೂ ಪಡೆದಿತ್ತು.

ಸೆಪ್ಟಂಬರ್ 27ರಂದು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಏರ್ಪಡಿಲಾಗುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Write A Comment