ಅಂತರಾಷ್ಟ್ರೀಯ

ದಂಡ ಕಟ್ಟಲು ತನ್ನ 4 ಮಕ್ಕಳನ್ನೇ ಮಾರಿದ !

Pinterest LinkedIn Tumblr

1

ಇಸ್ಲಾಮಾಬಾದ್, ಸೆ.9: ದಂಡಕಟ್ಟಲು ಹಣವಿಲ್ಲದ ವ್ಯಕ್ತಿಯೊಬ್ಬ ನಾಲ್ಕು ಪುಟ್ಟ ಮಕ್ಕಳನ್ನೇ ಮಾರಾಟಕ್ಕಿಟ್ಟ ಘಟನೆ ಹೃದಯ ಕಲಕುವ ಪಾಕಿಸ್ತಾನದಲ್ಲಿ ನಡೆದಿದೆ.

ಗುಲಾಮ್‌ರಸೂಲ್ ಕಾಟೊಹಾರ್ ಪಂಚಾಯ್ತಿ ಕಟ್ಟೆ ತನಗೆ ವಿಧಿಸಿದ್ದ 1.6 ಮೀಯನ್(16ಲಕ್ಷ) ರೂ. ದಂಡ ಕಟ್ಟಲು ತನ್ನ ಇಬ್ಬರು ಪುಟ್ಟ ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಇಲ್ಲಿನ ಜಾಕೋಬಾಬಾರ್ ಪ್ರೆಸ್‌ಕ್ಲಬ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ.

ಘಟನೆ ವಿವರ: ಈಗ್ಗೆ 2 ವರ್ಷಗಳ ಹಿಂದೆ ಕಾಟೋಹಾರ್ ಮಗ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅದು ಪಂಚಾಯ್ತಿಗೆ ಹೋದಾಗ ಅವರು 1.6 ಮಿಲಿಯನ್ ರೂ. ದಂಡ ಹಾಕಿದರು. ಕಟ್ಟಲು ಹಣವಿಲ್ಲದ ಅವನು 3ರಿಂದ 8 ವರ್ಷದೊಳಗಿನ ಇಬ್ಬರು ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಮಾರಲು ಹೊರಟಿದ್ದಾನೆ.

ಇಲ್ಲದಿದ್ದರೆ ಇಲ್ಲಿನ ಖೋಸಾ ಬುಡಕಟ್ಟು ಜನಾಂಗದಲ್ಲಿ ವಿವಾಹೇತರ ಸಂಬಂಧ ದೊಡ್ಡ ಅಪರಾಧ. ಅದಕ್ಕೆ ಭಾರಿ ದಂಡ ಇಲ್ಲವೆ ಹಿಂಸೆಯೇ ಪರಿಹಾರ. ಹಣ ಕಟ್ಟಿ ಕಟೋಹಾರ್ ತನ್ನ ಕುಟುಂಬವನ್ನು ಚಿತ್ರಹಿಂಸೆಯಿಂದ ಪಾರುಮಾಡಬೇಕಾಗಿದೆ. ಈ ಸಮುದಾಯದ ಪಂಚಾಯ್ತಿದಾರರನ್ನು ‘ಜಿರ್ಗ’ ಎನ್ನುತ್ತಾರೆ.

Write A Comment