ರಾಷ್ಟ್ರೀಯ

10 ವರ್ಷ …10 ಮಂದಿ ಮೇಲೆ ಅತ್ಯಾಚಾರ ಮಾಡಿರುವ ಪ್ರಿನ್ಸಿಪಾಲ್ ! ಈತನ ಘನಂದಾರಿ ಕೆಲಸ ಒಂದಲ್ಲ..ಎರಡಲ್ಲ

Pinterest LinkedIn Tumblr

rape

ರಾಜಕೋಟ್, ಸೆ.9: ನೀವು ನಂಬುತ್ತೀರೊ ಇಲ್ಲವೊ ಗಿತ್ತಿಲ್ಲ. ಆದರೂ ಈ ವಿಷಯವಂತೂ ನಿಜ. ಇವನೊಬ್ಬ ಪ್ರಿನ್ಸಿಪಾಲ್. ಇವನ ಹೆಸರು ಧವಳ್‌ತ್ರೀವೇದಿ ವಯಸ್ಸು 43. ಇವನು ಮಾಡಿರುವ ಘನಂದಾರಿ ಕೆಲಸ ಅಂದರೆ, ಕಳೆದ 10 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಮಂದಿ ಮಹಿಳೆಯರ (ಅಪ್ರಾಪ್ತರೂ ಸೇರಿ)ನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾನೆ. ಇತ್ತೀಚೆಗಷ್ಟೇ 16 ವರ್ಷದ ವಿದ್ಯಾರ್ಥಿನಿಯರಿಬ್ಬರನ್ನು ಅಪಹರಿಸಿ ಕರೆದೊಯ್ದು ಎರಡು ವರ್ಷ ನಿರಂತರ ಅತ್ಯಾಚಾರ ನಡೆಸಿದ್ದಾನೆ. ತಾನು ಹೋದ ಕಡೆಯಲ್ಲೆಲ್ಲ ಅಪಹೃತರ ಪೈಕಿ ಒಬ್ಬರನ್ನು ತನ್ನ ಹೆಂಡತಿ ಎಂದು ಹೇಳಿಕೊಳ್ಳುವುದು ಮತ್ತು ಅಲ್ಲೊಂದು ಉದ್ಯೋಗ ಸಂಪಾದಿಸಿ ಜೀವನ ನಡೆಸುವುದು.ಇವನ ಪದ್ಧತಿಯೇ ಆಗಿದೆ.

ಇದಲ್ಲದೆ ಇಬ್ಬರನ್ನು ಪ್ರೇಮ ವಿವಾಹ ಮಾಡಿಕೊಂಡಿದ್ದಾನೆ. ಇವನು ಅಧಿಕೃತವಾಗಿ ಮದುವೆಯಾಗಿದ್ದವಳು ವಿವಾಹವಾದ 6 ತಿಂಗಳಲ್ಲೇ ಮೃತಪಟ್ಟಿದ್ದಾಳೆ. ಅಪಹೃತ ಮಹಿಳೆಯರನ್ನು ಕರೆದುಕೊಂಡು, ಹರ್ಯಾಣ, ಛತ್ತೀಸ್‌ಗಡ, ಪಂಜಾಬ್, ಹಿಮಾಚಲಪ್ರದೇಶ, ಚಂಡೀಗಢಗಳಲ್ಲೂ ವಾಸ್ತವ್ಯ ಹೂಡಿದ್ದಾರೆ. ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಕಂಬಿ ಎಣಿಸುತ್ತಿದ್ದಾನೆ.

Write A Comment